ಹೊಸದಿಗಂತ ವರದಿ, ಕುಶಾಲನಗರ:
ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಕಾವೇರಿ ನಿಸರ್ಗಧಾಮದ ಕಾವೇರಿ ನದಿ ಮಧ್ಯದ ಗುಡ್ಡದಲ್ಲಿ ನಡೆದಿದೆ.
ಮೂಲತಃ ಚಾಮರಾಜನಗರದರಾಗಿದ್ದು, ಸುಂಟಿಕೊಪ್ಪದ ಬೇಕರಿಯಲ್ಲಿ ಕಲಸ ನಿರ್ವಹಿಸುತ್ತಿದ್ದ ಸತ್ಯರಾಜ್ (21) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.