ಭರ್ಜರಿ ಕಾರ್ಯಾಚರಣೆ: ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 20 ಕೋಟಿ ರೂ. ಮೌಲ್ಯದ ಕೊಕೇನ್​ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Bengaluru kempegowda international airport) ವಿದೇಶದಿಂದ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಕೊಕೇನ್ ಜಪ್ತಿಯಾಗಿದೆ.

ಇಥಿಯೋಪಿಯಾದಿಂದ ಕ್ಯಾಪ್ಸುಲ್‌ಗಳ ರೂಪದಲ್ಲಿ 2 ಕೆಜಿ ಕೊಕೇನ್ ಸಾಗಿಸುತ್ತಿದ್ದ ವಿದೇಶಿ ಪ್ರಜೆ ಕೆಂಪೇಗೌಡ ಏರ್​ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 20 ಕೋಟಿ ರೂ. ಮೌಲ್ಯದ 2 ಕೆಜಿ ಕೋಕೆನ್ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ಅದಿಸ್ ಅಬಾಬಾದಿಂದ ಇಥೋಪಿಯಾ ಏರ್ಲೈನ್ಸ್ ನಲ್ಲಿ ಬಂದಿದ್ದ ಆರೋಪಿ, ಡ್ರಗ್ಸ್ ಅಡಗಿಸಿಟ್ಟಿದ್ದ 50ಕ್ಕೂ ಅಧಿಕ ಕ್ಯಾಪ್ಸೂಲ್​ಗಳನ್ನು ನುಂಗಿದ್ದ. ಆದ್ರೆ, ಕಸ್ಟಮ್ಸ್ ಅಧಿಕಾರಿಗಳು ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್​ಗಳನ್ನು ಕಕ್ಕಿಸಿದ್ದಾರೆ.​ ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!