ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹಿರಿಯ ನಟಿ ತಾರಾ ಅವರ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ.
ಹ್ಯಾಕರ್ಸ್ ಅಕೌಂಟ್ನಲ್ಲಿ ತಾರಾ ಬಗೆಗಿನ ವಿಷಯಗಳನ್ನೇ ಪೋಸ್ಟ್ ಮಾಡಿ ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾರಾ ಸ್ನೇಹಿತರಿಗೆ ಅನಾವಶ್ಯಕ ಸಂದೇಶಗಳನ್ನು ಕಳುಹಿಸಿದ್ದಾರೆ. ಸದ್ಯ ತಾರಾ ಬೆಂಗಳೂರು ದಕ್ಷಿಣ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ.