ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಅಂತಾರಾಷ್ಟ್ರೀಯ ಬೇಕಲ್ ಫೆಸ್ಟ್‌ಗೆ ಕ್ಷಣಗಣನೆ ಆರಂಭವಾಗಿದೆ.
ನಾಳೆ (ಡಿ. 22) ಆರಂಭಗೊಳ್ಳಲಿರುವ ಈ ಉತ್ಸವ ಹಲವು ವೈಶಿಷ್ಟ್ಯತೆಯನ್ನು ಹೊಂದಿದೆ. ಇದೇ ಮೊದಲ ಬಾರಿಗೆ ಇಲ್ಲಿ ಪ್ಯಾರಾಚೂಟ್ ಹಾರಾಟ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲಿದೆ.
ಇನ್ನು ಜೆಟ್‌ಸ್ಕೈ, ಸ್ಪೀಡ್ ಬೋಟ್, ಬೀಚ್ ಬೈಕ್, ಒಂಟೆ, ಕುದುರೆ ಸವಾರಿಯ ಮೋಜು, ಜೈಂಟ್ ವೀಲ್ , ಕಂಪ್ಯೂಟರ್ ಗೇಮ್ಸ್, ಕಾರ್ ರೇಸಿಂಗ್, ಪ್ರತಿದಿನ ಡಿಜೆ ಪಾರ್ಟಿ, ಮ್ಯೂಸಿಕಲ್ ನೈಟ್‌ಗಳು ಎಲ್ಲರ ಮನತಣಿಸಲಿವೆ.
ಟಿಕೇಟು ಶುಲ್ಕ ಕೂಡಾ ಕಡಿಮೆ ಇರಿಸಲಾಗಿದ್ದು, ಹಿರಿಯರಿಗೆ ನೂರು ರೂ. ಹಾಗೂ ಮಕ್ಕಳಿಗೆ ಇಪ್ಪತ್ತೈದು ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಉತ್ಸವದಲ್ಲಿ ಎರಡು ಪ್ರಧಾನ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.