ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಬಿಗ್‌ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಬಿಗ್‌ಬಾಸ್ ಮನೆಯಿಂದ ಸೀದ ಪೊಲೀಸ್ ಠಾಣೆ ಸೇರಿದ್ದಾರೆ. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಕೆ ಕಾರಣವಾಗಿದ್ದಾರೆ ಎಂದು ಪೊಲೀಸರು ಪಲ್ಲವಿ ಪ್ರಶಾಂತ್‌ರನ್ನು ಅರೆಸ್ಟ್ ಮಾಡಿದ್ದಾರೆ.
ಪಲ್ಲವಿ ಪ್ರಶಾಂತ್ ಗೆಲುವು ಸಾಧಿಸಿ ಮನೆಯಿಂದ ಹೊರಬಂದಂತೆ ಸ್ಟುಡಿಯೋದಲ್ಲಿ ಇವರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಇಬ್ಬರು ಸ್ಫರ್ಧಿಗಳ ಅಭಿಮಾನಿಗಳು ಜಗಳ, ದಾಂಧಲೆ ಸೃಷ್ಟಿಮಾಡಿದ್ದು, ಕಾರ್ ಹಾಗೂ ಇನ್ನಿತರ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಪಲ್ಲವಿ ಪ್ರಶಾಂತ್ ಹಾಗೂ ಸಹೋದರನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.