ಹೊಸದಿಗಂತ ವರದಿ ಕೊಪ್ಪಳ:
ಅಳವಂಡಿ ಗ್ರಾಮದಲ್ಲಿ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದೆ. ಒಂದೇ ದಿನದಲ್ಲಿ 11 ಮಂದಿ ಮೇಲೆ ದಾಳಿ ಮಾಡಿದೆ.
ಮಹಿಳೆ, ವೃದ್ಧರು ಮತ್ತು ಮಕ್ಕಳು ಸೇರಿ ಹಲವರಿಗೆ ಕಚ್ಚಿ ಗಂಭೀರವಾಗಿ ದಾಳಿ ನಡೆಸಿದೆ. ಮಗುವೊಂದರ ಹಣೆ ಭಾಗ, ಮಹಿಳೆಯ ಕೈ, ವೃದ್ದನ ಹಣೆ ಮತ್ತು ಕಣ್ಣಿನ ಭಾಗ, ಕಾಲು ಸೇರಿ ಇತರ ಭಾಗಗಳಿಗೆ ಕಚ್ಚಿದೆ. ಗಾಯಾಳುಗಳು ಅಳವಂಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.