ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಮುನ್ನ ಟೀಮ್ ಇಂಡಿಯಾಕ್ಕೆ ಶಾಕ್: ಇಬ್ಬರು ತಂಡದಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೌತ್ ಆಫ್ರಿಕಾ ವಿರುದ್ಧದ ಟಿ೨೦ ಸಮಬಲ , ಏಕದಿನ ಸರಣಿ ಗೆದ್ದ ಖುಷಿಯಲ್ಲಿರುವ ಟೀಮ್ ಇಂಡಿಯಾಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದು, ಡಿಸೆಂಬರ್ 22 ರಿಂದ ಆರಂಭಗೊಳ್ಳಲಿರುವ 2 ಪಂದ್ಯದ ಟೆಸ್ಟ್ ಸರಣಿ ನಡುವೆ ಮಹತ್ವದ ಬೆಳವಣಿಗೆ ಆಗಿದೆ.

ಕುಟುಂಬದ ತುರ್ತು ಕಾರಣದಿಂದ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದಾರೆ. ಆದರೆ ಕೊಹ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿದ್ದಾರೆ. ಆದರೆ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ನ್ನು ತಂಡದಿಂದ ಕೈಬಿಡಲಾಗಿದೆ. ವೈಯುಕ್ತಿಕ ಕಾರಣದಿಂದ ಇಶಾನ್ ಕಿಶನ್ ತವರಿಗೆ ಮರಳುತ್ತಿದ್ದಾರೆ. ಹೀಗಾಗಿ ಇಶಾನ್ ಕಿಶನ್ ತಂಡದಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಗಾಯದಿಂದ ಚೇತರಿಸಿಕೊಳ್ಳದ ರುತುರಾಜ್ ಗಾಯಕ್ವಾಡ್ ಕೂಡ ತಂಡಗಿಂದ ಹೊರಬಿದ್ದಿದ್ದಾರೆ.

ವೈಯುಕ್ತಿಕ ಕಾರಣದಿಂದ ಟೆಸ್ಟ್ ಸರಣಿಯಲ್ಲಿ ಇಶಾನ್ ಕಿಶನ್‌ಗೆ ಸಾಧ್ಯವಾಗುತ್ತಿಲ್ಲ. ತಂಡದ ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿದ ಇಶಾನ್ ಕಿಶನ್ ತವರಿಗೆ ಮರಳಿದ್ದಾರೆ. ಇದೀಗ ಬಿಸಿಸಿಐ ಇಶಾನ್ ಕಿಶನ್‌ನ್ನು ತಂಡದಿಂದ ಕೈಬಿಟ್ಟಿದೆ. ಕಿಶನ್ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಆಯ್ಕೆ ಮಾಡಲಾಗಿದೆ. ಇತ್ತ 2ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಗಾಯಗೊಂಡ ರುತುರಾಜ್ ಗಾಯಕ್ವಾಡ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ರುತುರಾಜ್ ಗಾಯಕ್ವಾಡ್ 2 ಪಂದ್ಯದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
. ಇತ್ತ ವಿರಾಟ್ ಕೊಹ್ಲಿ ಕುಟುಂಬದ ತುರ್ತು ಕಾರಣಕ್ಕೆ ಮುಂಬೈಗೆ ಮರಳಿದ್ದಾರೆ. ಆದರೆ ಕೊಹ್ಲಿ ಡಿಸೆಂಬರ್ 26ಕ್ಕೂ ಮೊದಲು ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಕೊಹ್ಲಿ 2 ಟೆಸ್ಟ್ ಪಂದ್ಯಕ್ಕೆ ಲಭ್ಯರಿದ್ದಾರೆ.

ಸೌತ್ ಆಫ್ರಿಕಾ ಟೆಸ್ಟ್ ಸರಣಿಗೆ ಟೀಂ ಇಂಡಿಯಾ;
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!