ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೊದಲ ಸೌರಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು ಜ.6ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ಭೂಮಿಯಿಂದ 1.5 ಮಿಲಿಯನ್ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್‌ನ್ನು ಜನವರಿ 6ರಂದು ತಲುಪಲಿದೆ. ಆದರೆ ಯಾವ ಸಮಯ ಎಂದು ಅಂದಾಜುಮಾಡಲು ಇನ್ನೂ ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ.
ಬಿಂದು ತಲುಪುತ್ತಿದ್ದಂತೆಯೇ ನಾವು ಮತ್ತೊಮ್ಮೆ ಇಂಜಿನ್ ಹೊತ್ತಿಸುತ್ತೇವೆ, ಆಗ ಅದು ಎಲ್ಲಿಗೂ ಹೋಗುವುದಿಲ್ಲ. ಬಿಂದುವಿನ ಸ್ಥಾನಕ್ಕೆ ತೆರಳುತ್ತದೆ. ಒಮ್ಮೆ ನಿರ್ದಿಷ್ಟ ಬಿಂದುವಿನ ಸ್ಥಳಕ್ಕೆ ತಲುಪಿದರೆ ಅದರ ಸುತ್ತ ನೌಕೆಯು ಸುತ್ತಲಿದೆ ಎಂದು ಹೇಳಿದ್ದಾರೆ.
ಒಮ್ಮೆ ಆದಿತ್ಯ ತನ್ನ ನಿಗದಿತ ಸ್ಥಾನ ತಲುಪಿದರೆ ಸಾಕು ಮುಂದಿನ ಐದು ವರ್ಷ ಸೂರ್ಯನಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂದು ಕಾಣಬಹುದು ಎಂದಿದ್ದಾರೆ.