ಹೊಸದಿಗಂತ ವರದಿ ಶಿವಮೊಗ್ಗ:
ಹಿಂದೆ ಮೊಹಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ಇದ್ದ. ಈಗ ಸಿದ್ದರಾಮಯ್ಯ ಕೂಡ ಅದೇ ರೀತಿಯ ಹುಚ್ಚು ದೊರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ರಾಜ್ಯ ಈಗ ಶಾಂತಿಯಿಂದ ಇದೆ. ಯಾರೂ ಕೂಡ ಸಿದ್ದರಾಮಯ್ಯ ಬಳಿ ಹೋಗಿ ಹಿಜಾಬ್ ಹಾಕಲು ಅವಕಾಶ ಬೇಕು ಎಂದು ಕೇಳಿರಲಿಲ್ಲ. ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹಿಜಾಬ್‌ಗೆ ನಿಷೇಧ ಹೇರಲಾಗಿದೆ. ಆದರೆ ಮುಸ್ಲಿಮರ ನಾಯಕ ಸಿದ್ದರಾಮಯ್ಯ ಈಗ ಹಿಜಾಬ್ ‘ರಿಸಲು ಆದೇಶ ಹೊರಡಿಸಲು ಹೊರಟಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಉಡುಪಿಯ ಆರು ಮಂದಿ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಹಿಜಾಬ್ ‘ಧರಿಸಲು ಅವಕಾಶ ಬೇಕು ಎಂದು ತಗಾದೆ ತೆಗೆದಿದ್ದರು. ಅವರಿಗೆ ಕೆಲ ಮುಸ್ಲಿಂ ಸಂಘಟನೆಗಳ ಕುಮ್ಮಕ್ಕು ಇತ್ತು. ಅದರ ಜೊತೆಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಿದೆ. ಕೊನೆಗೆ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಸಮವಸ್ತ್ರದ ಬಗ್ಗೆ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಹೈಕೋರ್ಟ್ ಕೂಡ ಶಾಲಾ ವೇಳೆಯಲ್ಲಿ ಹಿಜಾಬ್ ‘ಧರಿಸುವುದನ್ನು ನಿಷೇಸಿದೆ. ನಂತರ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲಿ ಆದೇಶ ಬರುವುದು ಬಾಕಿ ಇದೆ. ಹಾಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಆದೇಶ ಹೊರಡಿಸುತ್ತಾರೆ? ಇದು ನ್ಯಾಯಾಂಗ ನಿಂದನೆ ಆಗಲಿದೆ. ಕಾನೂನು ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಸಿದ್ದರಾಮಯ್ಯಗೆ ಮನವರಿಕೆ ಮಾಡಬೇಕು. ಇಲ್ಲವಾದರೆ ನಾಲಾಯಕ್ ಕಾನೂನು ಮಂತ್ರಿ ಆಗುತ್ತಾರೆ ಎಂದರು.