ಹೊಸ ದಿಗಂತ ವರದಿ, ಮಂಡ್ಯ:
ಹನುಮನ ಪಾದದ ಮೇಲಾಣೆ ಮಂದಿರವನ್ನು ಕಟ್ಟಿವೆವು….ಎಂದು ಹನುಮ ಮಾಲಾಧಾರಿಗಳು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಆಕ್ರೋಶಿತರಾಗಿ ಘೋಷಣೆಯನ್ನು ಮೊಳಗಿಸಿದರು.
ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ಕರೆಕೊಟ್ಟಿರುವ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಹನುಮ ಮಾಲಾಧಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿ ಘೋಷಣೆ ಕೂಗಿದರು.
ಹನುಮಂತನ ಧ್ವಜ ಹಿಡಿದ ಮಾಲಾಧಾರಿಗಳು ಗಾಳಿಯಲ್ಲಿ ಬೀಸಿ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಹನುಮ ಮಂದಿರ ಕಟ್ಟುತ್ತೇವೆ ಎಂಬ ಶಪಥ ಮಾಡಿದ ಮಾಲಾಧಾರಿಗಳು, ಪ್ರತಿ ಹೆಜ್ಜೆಹೆಜ್ಜೆಗೂ ಶ್ರೀರಾಮ ಮತ್ತು ಹನುಮಂತನ ನೆನೆದು ಹರ್ಷೋದ್ಘಾರ ಮೊಳಗಿತು.
ಹಲವು ದಿನಗಳಿಂದ ಸಂಕೀರ್ತನಾ ಯಾತ್ರೆಗೆ ಹಿಂದೂ ಕಾರ್ಯಕರ್ತರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು, ಜಾಮೀಯಾ ಮಸೀದಿ ಬಳಿ ಹನುಮನ ಬೃಹತ್ ಫ್ಲ್ಸ್ೆ ಅಳವಡಿಸಿರುವುದು ಯಾತ್ರೆಗೆ ಪುಷ್ಠಿ ನೀಡಿದೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಜಾಮೀಯ ಮಸೀದಿ ಸುತ್ತಮುತ್ತ ಬಂದೋಬ್ತ್ ಹೆಚ್ಚಿಸಲಾಗಿದೆ. ಕೆಎಸ್ಆರ್ಪಿ ತುಕಡಿಗಳ ರೂಟ್ ಮಾರ್ಚ್ ಮಾಡಲಾಗಿತ್ತು.
ಶ್ರೀ ನಿಮಿಷಾಂಭ ದೇವಾಲಯದ ಬಳಿಯಿಂದ ಸಂಕೀರ್ತನ ಯಾತ್ರೆ ಕೈಗೊಂಡ ಮಾಲಧಾರಿಗಳು, ಪಟ್ಟಣದ ಶ್ರೀ ಕ್ಷಣಾಂಭಿಕ ದೇವಾಲಯದಲ್ಲಿ ದರ್ಶನ ಪಡೆದು ನಂತರ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಾಲೆ ವಿರ್ಜನೆ ಮಾಡಿದರು.