ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಟೆ ಸಂಭ್ರಮ ಕಳೆಗಟ್ಟಿದ್ದರೆ ಈ ಸಂಭ್ರಮ ಇನ್ನಷ್ಟು ಹೆಚ್ಚಿಸಲು ನೆರೆಯ ಪುಟ್ಟ ದೇಶ ನೇಪಾಳವೂ ತನ್ನ ಪಾಲು ನೀಡುತ್ತಿದೆ!
ಜ.22 ರಂದು ನಡೆಯಲಿರುವ ಸಮಾರಂಭಕ್ಕಾಗಿ ನೇಪಾಳ, ವಿವಿಧ ವಿನ್ಯಾಸದ ಆಭರಣಗಳು, ಬಟ್ಟೆಗಳು. ಪಾತ್ರೆ, ಸಿಹಿತಿಂಡಿಗಳನ್ನು ಒಳಗೊಂಡಿರುವ ವಿಶೇಷ ಸ್ಮರಣಿಕೆಗಳನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಜ.18ರಂದು ಸ್ಮರಣಿಕೆಗಳು, ಉಡುಗೋರೆಗಳ ಸಹಿತ ಜನಕಪುರಧಾಮ-ಅಯೋಧ್ಯಾಧಾಮ ಯಾತ್ರೆ ಆರಂಭಿಸಲಿರುವ ನೇಪಾಳ, ಜ.20 ರಂದು ಅಯೋಧ್ಯೆಯಲ್ಲಿ ಯಾತ್ರೆ ಕೊನೆಗೊಳಿಸಲಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಾನಕಿ ದೇವಾಲಯದ ಅರ್ಚಕ ರಾಮರೋಶನ್ ದಾಸ್ ವೈಷ್ಣವ್, ಈ ಎಲ್ಲಾ ಸ್ಮರಣಿಕೆಗಳನ್ನು ಶ್ರೀರಾಮ ಜನ್ಮಭೂಮಿ ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.