ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನ ದ್ವಾರಕಾದಲ್ಲಿ ಸಹಸ್ರಾರು ಮಹಿಳೆಯರು ಚಕ್ರಾಕಾರದಲ್ಲಿ ಕೃಷ್ಣನ ಚಿತ್ರದ ಎದುರು ಮಾಡಿರುವ ನೃತ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ರಾಸನೃತ್ಯವು ಡಿಸೆಂಬರ್ 23 ಮತ್ತು 24ರಂದು ನೆರವೇರಿದೆ. ಪ್ರತಿವರ್ಷವೂ ಈ ಪದ್ಧತಿಯನ್ನು ಆಚರಿಸಲಾಗುತ್ತದೆಯಾದರೂ ಈ ಬಾರಿ ಎಸಿಸಿ ಸಿಮೆಂಟ್ ಕಂಪನಿ ತನ್ನ ಕ್ಯಾಪಸ್ಸಿನಲ್ಲೇ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಗುಜರಾತಿನ ಅಹಿರ್ ಸಮುದಾಯಕ್ಕೆ ಸೇರಿದ ಬರೋಬ್ಬರಿ 37,000 ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು. ಡ್ರೋನ್ ಉಪಕರಣ ಬಳಸಿ ಸೆರೆಹಿಡಿದಿರುವ ನೃತ್ಯದೃಶ್ಯಗಳೀಗ ನಾನಾ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಆ ವೈಭವವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು ಎಂಬಂತಿದೆ.
#WATCH | 37000 women from the Ahir community performed #MahaRaas in Dwarka, Gujarat pic.twitter.com/iR1PIl8lQu
— DD News (@DDNewslive) December 24, 2023
ಸಾಮಾಜಿಕ ಸಾಮರಸ್ಯ ಮತ್ತು ಮಹಿಳಾ ಸಶಕ್ತೀಕರಣವನ್ನು ಬಿಂಬಿಸುವುದಕ್ಕಾಗಿ ಮಹಾ ರಾಸ್ ಅನ್ನು ಆಯೋಜಿಸಿದ್ದಾಗಿ ಎಸಿಸಿ ಕಂಪನಿ ಹೇಳಿಕೊಂಡಿದೆ.