ದಿಗಂತ ವರದಿ ವಿಜಯಪುರ:
ನಿಶ್ಚಿತಾರ್ಥ ಹಾಳು ಮಾಡಿದಕ್ಕೆ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನವಾಣೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯಾನ್ ಶೇಖ ಸಾವಿಗೀಡಾದ ಯುವಕನಾಗಿದ್ದು, ಇನ್ನು ಕೊಲೆ ಆರೋಪಿ ಹುಸೇನ್ಸಾಬ್ ನಂದಿಹಾಳನನ್ನು ಬಂಧಿಸಲಾಗಿದೆ ಎಂದರು.
ಅಲ್ಲದೇ, ಮೃತಪಟ್ಟಿರುವ ಅಯಾನ್ ಶೇಖ ಪುಣೆ ನಿವಾಸಿ ಆಗಿದ್ದಾನೆ. ಆದರೆ, ಹುಸೇನ್ಸಾಬ್ ನಿಶ್ಚಿತಾರ್ಥವನ್ನು ಅಯಾನ್ ಹಾಳು ಮಾಡಿದ್ದಾನೆ ಎಂದು ಆತನನ್ನು ಕೊಲೆ ಮಾಡಿಲಾಗಿದೆ. ಹೀಗಾಗಿ ಕೊಲೆ ಆರೋಪಿ ಹುಸೇನ್ಸಾಬ್ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.