ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ JN.1 ಹೊಸ ತಳಿ ಲಗ್ಗೆ ಇಟ್ಟಿದ್ದು, ಈಗಾಗಲೇ 63 JN.1 ಪ್ರಕರಣ ಪತ್ತೆಯಾಗಿದೆ.
34 ಪ್ರಕರಣ ಗೋವಾದಲ್ಲಿ, 9 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.ಇನ್ನು ಕರ್ನಾಟಕದಲ್ಲೂ ಹೊಸ ತಳಿ ಆತಂಕ ಸೃಷ್ಟಿಸಿದೆ. ಇದುವರೆಗೆ 8 ಹೊಸ ತಳಿ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಹಾಗೂ ತೆಲಂಗಾಣದಲ್ಲಿ 2 ಹೊಸ ತಳಿ JN.1 ಪ್ರಕರಣ ಪತ್ತೆಯಾಗಿದೆ.
ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ JN.1 ಪ್ರಕರಣ ಪೈಕಿ ಒಂಭತ್ತೂ ಪ್ರಕರಣಗಳು ಭಾನುವಾರವೇ ಪತ್ತೆಯಾಗಿದೆ. ಐವರು ಥಾಣೆ ನಿವಾಸಿಗಳಾಗಿದ್ದಾರೆ. ದೇಶದ ಮೊದಲ JN.1 ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಆದರೆ ಕೇರಳದಲ್ಲಿ ಇದುವರೆಗೆ 6 ಪ್ರಕರಣ ಪತ್ತೆಯಾಗಿದೆ. ಆದರೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ JN.1 ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ.
JN.1 ಪ್ರಕರಣ ಒಂದೆಡೆಯಾದರೆ, ಭಾರತದಲ್ಲಿನ ಕೋವಿಡ್ ಪ್ರಕರಣ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಭಾನುವಾರ 106 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಸೋಂಕು ಪ್ರಕರಣ 344ಕ್ಕೆ ಏರಿಕೆಯಾಗಿತ್ತು. ಶೇ.7.35 ರಷ್ಟು ಪಾಸಿಟಿವಿಟಿ ದರದಂತೆ 106 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.
ದೇಶದ ಕೋವಿಡ್ ಪ್ರಕರಣಗಳ ಪೈಕಿ ಕೇರಳದಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗುತ್ತಿದೆ. ಮತ್ತೆ ಕೇರಳದಿಂದ ಭಾರತಕ್ಕೆ 4ನೇ ಅಲೆ ಬೀಸುತ್ತಾ ಅನ್ನೋ ಆತಂಕ ಎದುರಾಗಿದೆ. ಆದರೆ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.