ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಜೆಎನ್1 ಹೆಚ್ಚುತ್ತಿದ್ದು, ಇದರ ಜೊತೆ ಜೊತೆಯಲ್ಲಿ ಕೊರೋನಾ ಪ್ರಮಾಣ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 125 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಜೊತೆಗೆ ಸೋಂಕಿನಿಂದಾಗಿ ಮೂವರು ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 2072 ಹಾಗೂ ರ್ಯಾಟ್ ಮೂಲಕ 1083 ಸೇರಿದಂತೆ 3155 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.ಇವರಲ್ಲಿ 125 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿದೆ ಎಂದಿದೆ.
ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆ 05, ಬೆಂಗಳೂರು ನಗರ 94, ಹಾಸನ 05, ಮೈಸೂರು 13, ಶಿವಮೊಗ್ಗ 02, ವಿಜಯನಗರ 02 ಸೇರಿದಂತೆ 125 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಟ್ಟಿದೆ.