ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಯಾತ್ರಾ ಋತುವಿನಲ್ಲಿ ಭಕ್ತರು ಕ್ಷೇತ್ರಕ್ಕೆ ಬೃಹತ್ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದರೂ, ಕೇರಳದ ಎಡರಂಗ ಆಡಳಿತ ಸೂಕ್ತ ವ್ಯವಸ್ಥೆಗಳನ್ನು ಮಾಡದೆ ಭಕ್ತರು ಬವಣೆ ಪಡುವಂತಾಗಿದೆ ಎಂಬ ಆರೋಪಗಳ ನಡುವೆಯೇ, ಶಬರಿಮಲೆಯಲ್ಲಿ ಭಾರೀ ಯಾತ್ರಿಕರ ದಟ್ಟಣೆ ಕಂಡುಬಂದಿದೆ.ಆದರೆ ಅನೇಕ ಕಡೆಗಳಲ್ಲಿ ಪೊಲೀಸರು ಯಾತ್ರಿಕರ ವಾಹನಗಳನ್ನು ಮಾರ್ಗ ಮಧ್ಯೆಯೇ ನಿಲ್ಲಿಸುತ್ತಿದ್ದು, ಈ ನಿರ್ಬಂಧದಿಂದ ಕಂಗೆಟ್ಟ ಭಕ್ತರು ಪ್ರತಿಭಟನೆಗಳಿದಿದ್ದಾರೆ.
ಶಬರಿಮಲೆಯಲ್ಲಿ ಒಂದೇ ದಿನ ಲಕ್ಷಕ್ಕೂ (100,990)ಅಕ ಯಾತ್ರಿಕರು ಪದಿನೆಟ್ಟಾಂಪಡಿ ಏರಿದ್ದು, ಈ ಋತುವಿನಲ್ಲಿ ದಾಖಲೆಯಾಗಿದೆ.ವಿಶೇಷವಾಗಿ ನೀಲಕ್ಕಲ್ನಲ್ಲಿ ಅಯ್ಯಪ್ಪ ಭಕ್ತರ ವಾಹನಗಳನ್ನು ತಡೆಯಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.ಶಬರಿಮಲೆಗೆ ತೆರಳುವ ಪಾಲಾ-ಪೊನ್ಕುನ್ನಮ್ ಮಾರ್ಗದಲ್ಲಿ ವಿಪರೀತ ವಾಹನ ದಟ್ಟಣೆ ಕಂಡುಬಂದಿದೆ. ಎಳಿಕುಲಂನಿಂದ ಇಳಂಗುಲಮ್ ದೇವಾಲಯದ ಜಂಕ್ಷನ್ ವರೆಗೆ ಸುಮಾರು 8 ಕಿ.ಮೀ.ದೂರಕ್ಕೆ ಟ್ರಾಫಿಕ್ ಜಾಮ್ ಉಂಟಾಗಿರುವ ಡ್ರೋನ್ ಫೊಟೋಗಳು ಬಿಡುಗಡೆಗೊಂಡಿವೆ.ಕೆಲವು ವಾಹನಗಳ 12ಗಂಟೆಗಳಿಗೂ ಅಕ ಕಾಲ ಈ ಟ್ರಾಫಿಕ್ ಜಾಮ್ನಲ್ಲಿ ಸಿಲುಕುವಂತಾಗಿದೆ.ಪೊಲೀಸರು ವೈಕಮ್ನಲ್ಲಿ ಯಾತ್ರಿಕರಿರುವ ಬಸ್ಸುಗಳನ್ನೂ ತಡೆದು ನಿಲ್ಲಿಸಿದ್ದು, ಗಂಟೆಗಟ್ಟಲೆ ಟ್ರಾಫಿಕ್ಜಾಮ್ಗೆ ಸಿಲುಕಿ ಯಾತ್ರಿಕರು ಕಂಗೆಟ್ಟಿದ್ದಾರೆ. ಇದೀಗ ಈ ಯಾತ್ರಿಕರು ಪ್ರತಿಭಟನೆಗಿಳಿದಿದ್ದಾರೆ ಎಂದು ಕೇರಳದ ಮಾಧ್ಯಮ ವರದಿಗಳು ತಿಳಿಸಿವೆ.
5,798ಯಾತ್ರಿಕರು ಪುಲ್ಲುಮೇಡು ಅರಣ್ಯ ಮಾರ್ಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ತಲುಪಿದ್ದಾರೆ.ಕ್ರಿಸ್ಮಸ್ ದಿನದಂದು ಭಕ್ತರು ದರ್ಶನಕ್ಕೆ 15 ಗಂಟೆಗಳಿಗೂ ಅಕ ಕಾಲ ಕಾಯಬೇಕಾಗಿ ಬಂದಿದೆ.ನೀಲಿಮಲದಿಂದಲೇ ಭಕ್ತರ ಕ್ಯೂ ಕಂಡುಬಂದಿದ್ದು, ಪಂಪಾ ಮತ್ತು ನೀಲಕ್ಕಲ್ನಲ್ಲಿ ಪೊಲೀಸರು ಕಠಿಣ ನಿರ್ಬಂಧಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗುತ್ತಿದ್ದಾರೆ.
100969 ಯಾತ್ರಿಕರು: ದಾಖಲೆ
ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಸೋಮವಾರದಂದು 1,00,969 ಮಂದಿ ಯಾತ್ರಿಕರು ಪದಿನೆಟ್ಟಾಂಪಡಿ(18 ಪವಿತ್ರ ಮೆಟ್ಟಿಲುಗಳು)ಯನ್ನೇರಿದ್ದು, ಈ ಯಾತ್ರಾ ಋತುವಿನಲ್ಲಿ ದಾಖಲೆಯಾಗಿದೆ.ಈ ನಡುವೆ ತಮಿಳ್ನಾಡಿನ ಯಾತ್ರಿಕರ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ನೀಲಕ್ಕಲ್ನಲ್ಲಿ ನಡೆದಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.