ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನಲ್ಲಿ ವರನೊಬ್ಬ ಕ್ಷುಲ್ಲಕ ಕಾರಣಕ್ಕೆ ಮದುವೆ ಬೇಡ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ವಧುವಿನ ಕಡೆಯವರು ಮಟನ್ ಮಾಡಿಲ್ಲ ಎಂದು ಮದುವೆ ಬೇಡ ಎಂದು ಹೇಳಿದ್ದಾರೆ. ನಿಶ್ಚಿತಾರ್ಥದ ನಂತರ ಎರಡೂ ಮನೆಯವರು ಕುಳಿತು ಊಟದ ಮೆನ್ಯು ತಯಾರಿ ಮಾಡಿದ್ದರು.
ಅದರಲ್ಲಿ ಮಟನ್ ಬೇಕು ಎಂದು ವರನ ಕಡೆಯವರು ಹೇಳಿದ್ದಾರೆ, ಅದಕ್ಕೆ ಹುಡುಗಿಯ ಕಡೆಯವರು ಆಗುವುದಿಲ್ಲ ಎಂದಿದ್ದಾರೆ. ಮಟನ್ ಬೇಕು ಎಂದು ಹಠಕ್ಕೆ ಬಿದ್ದ ಕಾರಣ ಮಾತಿಗೆ ಮಾತು ಬೆಳೆದಿದೆ. ಇದೇ ಜಗಳ ದೊಡ್ಡದಾಗಿ ಮದುವೆಯೇ ರದ್ದಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ನಿಭಾಯಿಸಿದ್ದಾರೆ.