ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಶಬರಿಮಲೆಯಲ್ಲಿ ಭಕ್ತಪ್ರವಾಹ ಹರಿದಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೂ ಶಬರಿಮಲೆಯಲ್ಲಿ ಆದಾಯ ಸಂಗ್ರಹ 200 ಕೋಟಿ ರೂಪಾಯಿ ದಾಟಿದೆ.
ಈ ಬಗ್ಗೆ ಟಿಡಿಬಿ ಮಾಹಿತಿ ನೀಡಿದ್ದು, ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ 63 ಕೋಟಿ ರೂ ಕಾಣಿಕೆ ರೂಪದಲ್ಲಿದೆ ಹಾಗೂ 96 ಕೋಟಿ ರೂಪಾಯಿ ಅರವಣ ಪ್ರಸಾದ ಮಾರಾಟದ ಹಣವಾಗಿದೆ ಎನ್ನಲಾಗಿದೆ.
ಅಪ್ಪಂ ಪ್ರಸಾದದಿಂದ 13 ಕೋಟಿ ರೂಪಾಯಿ ಆದಾಯ ಗಳಿಸಲಾಗಿದೆ. ಮಂಡಲ ಪೂಜೆಯ ನಂತರ ದೇಗುಲವನ್ನು ಬುಧವಾರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು ಎಂದು ಟಿಡಿಬಿ ಹೇಳಿದೆ.