ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಮಿಗ್ -29 ಫೈಟರ್ ಜೆಟ್ ಟೈರ್ ಸ್ಫೋಟಗೊಂಡಿದೆ .
ಮಂಗಳವಾರ ಮಧ್ಯಾಹ್ನವಿಮಾನವು ಟ್ಯಾಕ್ಸಿವೇಯಲ್ಲಿ ಸಿಲುಕಿಕೊಂಡಿತ್ತು, ಆದರೆ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ವಿಮಾನ ನಿಲ್ದಾಣದ ರನ್ವೇಯನ್ನು ಸಂಜೆ 4 ಗಂಟೆಯವರೆಗೆ ಮುಚ್ಚಿದರು.
ವಿಮಾನವು ತನ್ನ ವಾಡಿಕೆಯ ಹಾರಾಟಕ್ಕೆ ಮುಂಚಿತವಾಗಿ ಟ್ಯಾಕ್ಸಿವೇಯಲ್ಲಿದ್ದಾಗ, ಟೈರ್ ಸ್ಫೋಟಗೊಂಡಿದೆ. ಅದರ ನಂತರ, ಅಗ್ನಿಶಾಮಕ ದಳ ಮತ್ತು ಇತರ ಸೇವೆಗಳನ್ನು ಕಾರ್ಯಾಚರಣೆ ನಡೆಸಲಾಯಿತು ಎಂದು ನೌಕಾಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ