Wednesday, December 31, 2025

ಟೆಸ್ಟ್‌ Ranking: ಇಂಗ್ಲೆಂಡ್‌ ನ ಹ್ಯಾರಿ ಬ್ರೂಕ್ ಗೆ ಮುಂಬಡ್ತಿ, ಬೌಲಿಂಗ್ ನಲ್ಲಿ ಬುಮ್ರಾ ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಟ್‌(ICC Test rankings) ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ ನ ಹ್ಯಾರಿ ಬ್ರೂಕ್ ಮೂರು ಸ್ಥಾನಗಳ ಜಿಗಿತವನ್ನು ಸಾಧಿಸಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಜೋ ರೂಟ್‌(867) ಅವರಿಗಿಂತ 21 ಅಂಕದ ಹಿನ್ನಡೆಯಲ್ಲಿದ್ದಾರೆ. ಅತ್ತ ಆಸ್ಟ್ರೇಲಿಯಾ ವೇಗಿ ಮಿಚೆಲ್‌ ಸ್ಟಾರ್ಕ್‌ ಒಂದು ಮತ್ತು ಪಾಕಿಸ್ತಾನದ ನೊಮಾನ್‌ ಅಲಿ ಎರಡು ಸ್ಥಾನಗಳ ಪ್ರಗತಿಯೊಂದಿಗೆ 843 ಅಂಕದೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಏತನ್ಮಧ್ಯೆ, ಭಾರತದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಮತ್ತೆ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿನ ಶ್ರೇಯಾಂಕದಲ್ಲಿ ಅಲೆಕ್ಸ್ ಕ್ಯಾರಿ ನಾಲ್ಕು ಸ್ಥಾನ ಕುಸಿತ ಕಂಡ ನಂತರ ಇದು ಸಂಭವಿಸಿದೆ.

ಆಶಸ್‌ನ ನಾಲ್ಕನೇ ಟೆಸ್ಟ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಒಂದು ಸ್ಥಾನ ಭಡ್ತಿ ಪಡೆದು ಜಂಟಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. 879 ರೇಟಿಂಗ್ ಹೊಂದಿರುವ ಭಾರತದ ಜಸ್ಪ್ರೀತ್ ಬುಮ್ರಾ ಪ್ರಸುತ್ತ ಮೊದಲ ಸ್ಥಾನದಲ್ಲಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಜೋಶ್ ಟಂಗ್, ಮೊದಲ ಇನ್ನಿಂಗ್ಸ್‌ನಲ್ಲಿ ಐದು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದ ನಂತರ 13 ಸ್ಥಾನ ಬಡ್ತಿ ಪಡೆದು 30ನೇ ಸ್ಥಾನಕ್ಕೆ ತಲುಪಿದ್ದಾರೆ. ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಬ್ರೈಡನ್ ಕಾರ್ಸ್ ಮತ್ತು ಮೊದಲ ಪಂದ್ಯದಲ್ಲಿ ಚೊಚ್ಚಲ ವಿಕೆಟ್ ಪಡೆದ ನಂತರ ಆರು ಸ್ಥಾನಗಳನ್ನು ಹೆಚ್ಚಿಸಿಕೊಂಡು 23 ನೇ ಸ್ಥಾನಕ್ಕೆ ತಲುಪಿದ್ದಾರೆ.

error: Content is protected !!