ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹ: ಇಂಗ್ಲಿಷ್ ಭಾಷೆಯಲ್ಲಿದ್ದ ಜಾಹೀರಾತು ಹರಿದು ಕರವೇ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಿ ಎಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದ್ದು, ಇಂಗ್ಲಿಷ್‌ನಲ್ಲಿದ್ದ ಜಾಹೀರಾತುಗಳ ಫಲಕವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯ ಸಾದಹಳ್ಳಿ ಟೋಲ್‌ನಿಂದ ರ‍್ಯಾಲಿ ಆರಂಭವಾಗಿದೆ. ಈ ರ‍್ಯಾಲಿ ಕಬ್ಬನ್ ಪಾರ್ಕ್‌ವರೆಗೂ ನಡೆಯಲಿದ್ದು, ಸಾದಹಳ್ಳಿ ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ರ‍್ಯಾಲಿ ವೇಳೆ ಕಾರ್ಯಕರ್ತರು ಬೇರೆ ಭಾಷೆಗಳಕ ಫಲಕ, ಬೋರ್ಡ್‌ಗಳು ಹಾಗೂ ಜಾಹೀರಾತುಗಳನ್ನು ಹರಿದು ಹಾಕಿದ್ದಾರೆ. ಈ ರ‍್ಯಾಲಿಗೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರವೇ ಪ್ರತಿಭಟನಾ ರ‍್ಯಾಲಿಯನ್ನು ತಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ನಾಲ್ಕು ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!