ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಅನಿಮಲ್ ಸಿನಿಮಾದಿಂದ ನಟಿ ತೃಪ್ತಿ ದಿಮ್ರಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರ ಸಿನಿ ಜೀವನಕ್ಕೆ ಅನಿಮಲ್ ಸಿನಿಮಾ ಹೈಲೈಟ್ ಆಗಿದ್ದು, ಒಳ್ಳೊಳ್ಳೆ ಆಫರ್ ತೃಪ್ತಿ ಬಳಿ ಬಂದಿದೆ. ಇದರಲ್ಲಿ ಆಶಿಕಿ 3 ಕೂಡ ಒಂದು.
ಹೌದು, ಈಗಾಗಲೇ ಆಶಿಕಿ 1 ಹಾಗೂ 2 ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಆಶಿಕಿ 3 ತಯಾರಿ ನಡೆಸಲಾಗುತ್ತಿದೆ. ಇದರಲ್ಲಿ ನಟ ಕಾರ್ತಿಕ್ ಆರ್ಯನ್ ಹಾಗೂ ತೃಪ್ತಿ ದಿಮ್ರಿ ಒಟ್ಟಾಗಿ ನಟಿಸಲಿದ್ದಾರೆ.
ಅನುರಾಗ್ ಬಸು ನಿರ್ದೇಶನದ ಈ ಸಿನಿಮಾದಲ್ಲಿ ಸಾಕಷ್ಟು ರೊಮ್ಯಾನ್ಸ್ ಹಾಗೂ ಒಳ್ಳೆಯ ಹಾಡುಗಳಿವೆ ಅನ್ನೋದಂತೂ ಖಾತ್ರಿಯಾಗಿದೆ. ಇತ್ತ ಅನಿಮಲ್ ಬ್ಯೂಟಿ ತೃಪ್ತಿ ಪರ್ಫಾಮೆನ್ಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.