ಹೊಸದಿಗಂತ ವರದಿ ಮಡಿಕೇರಿ:
ಶಬರಿಮಲೆ ಯಾತ್ರೆ ಮುಗಿಸಿ ಮರಳುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕ ಸಾವಿಗೀಡಾಗಿ ಮೂವರು ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಕೊಡಗಿನ ಹಾರಂಗಿ ಸಮೀಪದ ದೊಡ್ಡತ್ತೂರು ನಿವಾಸಿ ಕುಂಞಿರಾಮ ಅವರ ಪುತ್ರ ಚಂದ್ರ ಎಂದು ಗುರುತಿಸಲಾಗಿದ್ದು, ಕುಶಾಲನಗರದ ಮುಳ್ಳುಸೋಗೆಯವರೆನ್ನಲಾದ ಲಿಂಗಂ, ಹರೀಶ್, ಸಂತೋಷ್ ಗಂಭೀರವಾಗಿ ಗಾಯಗೊಂಡು ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಶಬರಿಮಲೆಯಿಂದ ಮರಳುತ್ತಿದ್ದಾಗ ಚಂದ್ರ ಅವರು ಚಾಲಿಸುತ್ತಿದ್ದ ಕಾರು ಪೆರಂಬೂರು ಅಂಗಮಾಲಿ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿರುವುದಾಗಿ ಹೇಳಲಾಗಿದೆ.