ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮ ಮುತ್ತು ಕಾಶ್ಮೀರದಲ್ಲಿ ಭಯೋತ್ಪಾದನ ಚಟುವಟಿಕೆ ನಡೆಸುತ್ತಾ, ಮುಸ್ಲಿಂ ಆಳ್ವಿಕೆ, ಪ್ರತ್ಯೇಕತಾ ವಾದ, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ(ಮಸರತ್ ಅಲಂ ಬಣ)ವನ್ನು ಕೇಂದ್ರ ಸರ್ಕಾರ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದೆ.
ಮುಸ್ಲಿಂ ಸಮುದಾಯದ ಅಭಿವೃದ್ಧಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳ ಹೆಸರಿನಲ್ಲಿ ನೋಂದಣಿಯಾಗಿರುವ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(MA) ಬಣ ಭಯೋತ್ಪಾದಕ ಚಟುವಟಿಕೆಯಲ್ಲಿ ಸಕ್ರಿಯವಾಗಿತ್ತು. ಈ ಸಂಘಟನೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(MA) ಬಣ ನಿಷೇಧಿಸಿದೆ.
ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಸಂಘಟನೆಯನ್ನುಮಸರತ್ ಅಲಂ ಮುನ್ನಡೆಸುತ್ತಿದ್ದ. ಈತ ಆಲ್ ಇಂಡಿಯನ್ ಹುರಿಯತ್ ಕಾನ್ಫರೆನ್ಸ್ ಹಂಗಾಮಿ ಮುಖ್ಯಸ್ಥನಾಗಿದ್ದಾನೆ. ಕಾಶ್ಮೀರ ಪ್ರತ್ಯೇಕತವಾದಿ ಸೈಯದ್ ಆಲಿ ಶಾ ಗಿಲಾನಿ ನೇತೃತ್ವದಲ್ಲಿ ಹುರಿಯತ್ ಕಾನ್ಫರೆನ್ಸ್ ಮುನ್ನಡೆಯುತ್ತಿತ್ತು. ಗಿಲಾನಿ 2021ರಲ್ಲಿ ಮೃತಪಟ್ಟಿದ್ದ. ಬಳಿಕ ಅಸರತ್ ಅಲಂನನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಇದೇ ಮಸರತ್ ಅಲಂ ನಾಯಕತ್ವದಲ್ಲಿ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ ಹಲವು ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಈ ಕುರಿತು ಅಮಿತ್ ಶಾ ಎಕ್ಸ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದು, ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ(ಮಸರತ್ ಅಲಂ ಬಣ)ವನ್ನು ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಈ ಸಂಘಟನೆ ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದೆ. ಉಗ್ರ ಚಟುವಟಿಕೆಗೆ ಬೆಂಬಲ, ಆರ್ಥಿಕ ನೆರವು, ಇಸ್ಲಾಂ ಆಳ್ವಿಕೆ ಸ್ಥಾಪಿಸಲು ಪ್ರಚೋದನೆ, ರಾಷ್ಟ್ರವಿರೋಧಿ ಕೃತ್ಯ, ಪ್ರತ್ಯೇಕತವಾದಿ ಚಟುವಟಿಕೆಯಲ್ಲಿ ಈ ಸಂಘಟನೆ ತೊಡಗಿಕೊಂಡಿತ್ತು. ನಮ್ಮ ರಾಷ್ಟ್ರತ ಏಕತೆ, ಸೌರ್ವಭೌಮತೆ ಹಾಗೂ ಸಮಗ್ರತೆ ವಿರುದ್ಧವಾಗಿರುವ ಯಾರನ್ನೂ ಬಿಡುವುದಿಲ್ಲ. ಇಂತವರಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಅನ್ನೋ ಸರ್ಕಾರದ ಸಂದೇಶ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.