ಹೊಸ ದಿಗಂತ ವರದಿ, ಮೈಸೂರು:
ಡಸ್ಟ್ ತುಂಬಿದ 10 ಚಕ್ರದ ಲಾರಿ ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 18 ಕುರಿಗಳ ಸಾವನ್ನಪ್ಪಿ, 40 ಕುರಿಗಳು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಬೇಗೂರು ಸರಗೂರು ಮುಖ್ಯರಸ್ತೆಯ ಹೆಡಿಯಾಲ ಸಮೀಪದ ಇಂದಿರಾ ನಗರ ಗ್ರಾಮ. ಘಟನೆಯಲ್ಲಿ ಕುರಗಾಹಿಗೂ ಗಾಯವಾಗಿದೆ.
ಮುಂಜಾನೆ 5 ಗಂಟೆ ವೇಳೆಯಲ್ಲಿ ಡಸ್ಟ್ ತುಂಬಿರುವ ಟಿಪ್ಪರ್ ಲಾರಿ ತುಮಕೂರು ಜಿಲ್ಲೆ ಬೇಗೂರು ಕಡೆಯಿಂದ ವೇಗವಾಗಿ ಬಂದು ಕುರಿಗಳ ಮೇಲೆ ಹರಿಸಿದ್ದಾನೆ. ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಕುರಿಗಾಹಿ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಸುಮಾರು 8 ಲಕ್ಷ ನಷ್ಟವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪಿಎಸ್ಐ ರಮೇಶ್ ಕರ್ಕಿಕಟ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.