ಶಬರಿಮಲೆ ಮಂಡಲ ಪೂಜೆ ಸಂಪನ್ನದ ಬೆನ್ನಿಗೇ ನಡೆಯಿತು ಸಮರೋಪಾದಿ ಸ್ವಚ್ಛತೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳವಾದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಪೂಜೆ ಸಂಪನ್ನಗೊಂಡಿದ್ದು, ಸನ್ನಿಧಿಯನ್ನು ಮುಚ್ಚಲಾಗಿದೆ.
ಇದರ ಬೆನ್ನಿಗೇ ಸಮರೋಪಾದಿಯಲ್ಲಿ ಸನ್ನಿಧಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ನಿರ್ವಹಣಾ ಇಲಾಖೆ, ಅಗ್ನಿಶಾಮಕ ಸಿಬ್ಬಂದಿಗಳು, ಶಬರಿಮಲೆ ವಿಶುದ್ಧಿ ಸೇನೆ ಜಂಟಿಯಾಗಿ ಸ್ವಚ್ಛತಾ ಕಾರ್ಯ ಕೈಗೊಂಡಿವೆ.
ಅಯ್ಯಪ್ಪನ ಸನ್ನಿಧಿ, ಹದಿನೆಂಟು ಮೆಟ್ಟಲು, ಮಾಳಿಗಪ್ಪ್ಪುರಂ, ಮಹಾಕಾಣಿಕ, ಅರವಣ ಕೌಂಟರ್ ಪರಿಸರ ಮೊದಲಾದ ಪರಿಸರಗಳಲ್ಲಿ ಸ್ವಚ್ಛತೆ ನಡೆಸಲಾಗಿದೆ. ಇದಲ್ಲದೆ ಬರೋಬ್ಬರಿ ೧,೫೦೦ಕ್ಕೂ ಹೆಚ್ಚು ಕಾರ್ಮಿಕರು ಪಂಬಾದಿಂದ ಸನ್ನಿಧಾನದ ವರೆಗೆ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!