ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಮಂದಿರ ಲೋಕಾರ್ಪಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ನಾಳೆ ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಲಿದ್ದು, ಲೋಕಾರ್ಪಣೆಯ ಪೂರ್ವಭಾವಿ ರಿಹರ್ಸಲ್ ನಡೆಯಲಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ದರುಶನಕ್ಕೆ ಭಕ್ತಾದಿಗಳು ಕಾತರರಾಗಿ ಕಾಯುತ್ತಿದ್ದಾರೆ, ಕೆಲವೇ ದಿನಗಳಲ್ಲಿ ಜನರ ಕನಸು ನನಸಾಗುತ್ತಿದೆ. ನಾಳೆ ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಿ ಹೊಸ ಏರ್‌ಪೋರ್ಟ್ ಉದ್ಘಾಟನೆಯನ್ನು ಮಾಡಲಿದ್ದಾರೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಅಯೋಧ್ಯೆ ಸಜ್ಜಾಗಿದ್ದು, ಒಟ್ಟಾರೆ 15 ಕಿ.ಮೀ. ರೋಡ್ ಶೋ ಮೂಲಕ ಆಗಮಿಸಿ ಅಯೋಧ್ಯೆ ಜಂಕ್ಷನ್ ಎಂಬ ಹೊಸ ರೈಲ್ವೆ ನಿಲ್ದಾಣವನ್ನೂ ಉದ್ಘಾಟಿಸಲಿದ್ದಾರೆ. ಏರ್‌ಪೋರ್ಟ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.