ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ನಂತರ ಇದೀಗ ಜಪಾನ್ ಚಂದ್ರನ ಅಂಗಳಕ್ಕೆ ಕಾಲಿಡೋದಕ್ಕೆ ಜಪಾನ್ ರೆಡಿಯಾಗಿದೆ. ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ ಉಡಾವಣೆ ಮಾಡಿದ್ದ ಬಾಹ್ಯಾಕಾಶ ನೌಕೆ ಚಂದ್ರನನ್ನು ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಚಂದ್ರನ ಅಂಗಳಕ್ಕೆ ಜಪಾನ್ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ. ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ ಡಿ.25ರಂದು ಸಂಜೆ 4:51 ಸುಮಾರಿಗೆ ಯಶಸ್ವಿಯಾಗಿ ಚಂದ್ರದ ಕಕ್ಷೆಯನ್ನು ತಲುಪಿದೆ.
ಜನವರಿ 19 ಅಥವಾ 20ರಂದು ಸ್ಲಿಮ್ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಲಿದೆ, ಇಡೀ ಜಪಾನ್ ಈ ಕ್ಷಣಕ್ಕೆ ಕಾತುರದಿಂದ ಕಾಯುತ್ತಿದೆ. ಲ್ಯಾಂಡ್ ಆದರೆ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆದ ಐದನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗುತ್ತದೆ.