ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಕಾಸರಗೋಡು ಜಿಲ್ಲೆಯ ಪೆರಿಯ ಕ್ಯಾಂಪಸ್‌ನಲ್ಲಿ ಕೋವಿಡ್ ಪರೀಕ್ಷೆ ಮತ್ತೆ ಆರಂಭಿಸಿದೆ.
ಈ ಹಿಂದೆ 2020ರಲ್ಲಿ ಕಾಡಿದ್ದ ಕೋವಿಡ್ ಅಲೆಗಳ ಸಂದರ್ಬ ಈ ವಿಶ್ವವಿದ್ಯಾನಿಲಯ, ನಿಯಂತ್ರಣ ಕ್ರಗಳಲ್ಲಿ ತನ್ನ ಪಾಲು ನೀಡಿತ್ತು. 2020ರ ಮಾರ್ಚ್‌ನಲ್ಲಿ ಈ ವಿಶ್ವವಿದ್ಯಾನಿಲಯಕ್ಕೆ ಕೋವಿಡ್ ಬಾಧಿತರನ್ನು ಪರೀಕ್ಷಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಅನುಮೋದನೆ ನೀಡಿತ್ತು.
ಕೋವಿಡ್ ಪತ್ತೆಗಾಗಿ ಇಲ್ಲಿ ಇದುವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಆರ್‍ಟಿಪಿಸಿಆರ್ ತಪಾಸಣೆ ನಡೆಸಲಾಗಿದೆ. ಇದೀಗ ಮೂರು ವರ್ಷಗಳ ಬಳಿಕ ಕೋವಿಡ್ ರೂಪಾಂತರಗೊಂಡು ಹೆಡೆಯೆತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಮತ್ತೆ ಸಕ್ರಿಯವಾಗಿದೆ.