ಹೊಸದಿಗಂತ ವರದಿ, ಕಲಬುರಗಿ:
ಇಲ್ಲಿನ ಇಂದಿರಾ ಸ್ಮಾರಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕುರ್ಚಿ ಎತ್ತಿ ಹಾಕಿ ದಾಂಧಲೆ ನಡೆಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ಅಯೂಬ್ ತಬ್ಬುಖಾನ್ ಅವರು ಪಾಲಿಕೆಯ ಮಹಾಪೌರ, ಉಪ ಮಹಾಪೌರ ಹಾಗೂ ಪಾಲಿಕೆಯ ಆಯುಕ್ತರ ಸಮ್ಮುಖದಲ್ಲಿ ಕುರ್ಚಿ ಎತ್ತಿ ಹಾಕಿ ದಾಂಧಲೆ ಮಾಡಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಪೌರ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಗಲಾಟೆಯಾಗಿದ್ದು, ಬಂಜಾರಾ ಸಮುದಾಯದ ಮಹಿಳೆಯರು ಕಸ ಗುಡಿಸುವುದನ್ನು ಕಂಡಿದ್ದೇವೆ.ಆದರೆ, ಯಾವತ್ತಾದರೂ ಬುರ್ಖಾ ಹಾಕಿಕೊಂಡು ಮಹಿಳೆಯರು ಕಸ ಗುಡಿಸುವುದನ್ನು ನೋಡಿದ್ದಿರಾ ಎಂದು ಬಿಜೆಪಿ ಪಾಲಿಕೆ ಸದಸ್ಯ ಕೃಷ್ಣಾ ನಾಯಕ್ ಹೇಳಿದ್ದಾರೆ.
ಕೃಷ್ಣ ನಾಯಕ ಅವರ ಮಾತಿನಿಂದ ಕೆರಳಿದ ಕಾಂಗ್ರೆಸ್ ಪಕ್ಷದ ಸದಸ್ಯ ಅಯೂಬ್ ತಬ್ಬುಖಾನ್ ಆಕ್ರೋಶಗೊಂಡು ಸಭಾಂಗಣದಲ್ಲಿ ಮೇಯರ್ ಮುಂದಿದ್ದ ಕುರ್ಚಿ ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸದಸ್ಯ ಕೃಷ್ಣಾ ನಾಯಕ್ ಕ್ಷಮೆ ಕೋರುವಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದು, ಮೇಯರ್ ಸೂಚನೆ ಬಳಿಕ ಸದಸ್ಯ ಕೃಷ್ಣಾ ನಾಯಕ್ ಕ್ಷಮೆ ಕೋರಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ