ಹೊಸ ದಿಗಂತ ವರದಿ, ಮಡಿಕೇರಿ:
ಆಯುರ್ವೇದಿಕ್ ಸ್ಪಾ ದ ಮಾಲಕರೊಬ್ಬರಿಗೆ ಹಣದ ಬೇಡಿಕೆ ಇಟ್ಟ ‘ನಕಲಿ ಕ್ರೈಂ ಪೊಲೀಸ್’ ಒಬ್ಬನ್ನು ಬೈಲುಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕೆ.ಶರ್.ನಗರ ತಾಲೂಕಿನ ಮಧುವನಹಳ್ಳಿಯ ನಿವಾಸಿ ದಿವ್ಯರಾಜ್ ಎಂಬಾತನೇ ಬಂಧಿತ ಆರೋಪಿ.
ಕೊಪ್ಪ ಗ್ರಾಮದಲ್ಲಿರುವ ಆಯುರ್ವೇದಿಕ್ ಸ್ಪಾ ದ ಮಾಲಕರಾದ ಪುಷ್ಪಲವಕುಮಾರ್ ಎಂಬವರಿಗೆ ಹಣದ ಬೇಡಿಕೆ ಇಟ್ಟಾಗ ಸಂಶಯಗೊಂಡ ಅವರು ಬೈಲುಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೈಲುಕೊಪ್ಪ ಠಾಣೆಯ ಪಿಎಸ್ಐ ಅಜಯ್ ಕುಮಾರ್, ಸಿಬ್ಬಂದಿಗಳಾದ ಶಿವಣ್ಣ, ಕುಮಾರಸ್ವಾಮಿ, ತ್ರಿನೇಶ್, ರಾಕೇಶ್, ಸುರೇಶ್, ಮಹಿಳಾ ಸಿಬ್ಬಂದಿ ಅನಿತಾ ಅವರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನಕಲಿ ಕ್ರೈಂ ಪೊಲೀಸ್ ಎಂಬುದು ಬೆಳಕಿಗೆ ಬಂದಿದೆ.
ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.