ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಚಾಲಕನೊಬ್ಬ ನಿದ್ದೆಗಣ್ಣಿನಲ್ಲಿ ಟೀ ಅಂಗಡಿಗೆ ಟ್ರಕ್ ನುಗ್ಗಿಸಿದ್ದು, ಐವರು ಮೃತಪಟ್ಟಿದ್ದಾರೆ.
ಸಿಮೆಂಟ್ ತುಂಬಿದ ಟ್ರಕ್ ಇದಾಗಿದ್ದು, ಶಿವಗಂಗೈಗೆ ತೆರಳುತ್ತಿತ್ತು. ಬೆಳಗಿನ ಜಾವದಲ್ಲಿ ಚಾಲಕನಿಗೆ ನಿದ್ದೆ ತಡೆಯಲಾಗದೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಹಲವು ವಾಹನಗಳಿಗೆ ಟ್ರಕ್ ಡಿಕ್ಕಿಯಾಗಿದ್ದು, ಸೀದ ಟೀ ಅಂಗಡಿಗೆ ನುಗ್ಗಿದೆ.
ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಟೀ ಅಂಗಡಿಯ ಬಳಿ ಶಬರಿಮಲೆ ಯಾತ್ರಾರ್ಥಿಗಳು ಟೀ ಕುಡಿಯುತ್ತಾ ನಿಂತಿದ್ದರು. ಈವೇಳೆ ಅವರ ಮೇಲೆ ಟ್ರಕ್ ಎರಗಿದೆ. ಮೃತರ ಬಗ್ಗೆ ಮಾಹಿತಿ ದೊರೆತಿಲ್ಲ. ತನಿಖೆ ಮುಂದುವರಿದಿದೆ.