ಹೊಸದಿಂತ ಡಿಜಿಟಲ್ ಡೆಸ್ಕ್:
ಅರೇಬಿಯನ್ ಸಮುದ್ರದಲ್ಲಿ ವ್ಯಾಪಾರಿ ಹಡಗಿನ ಮೇಲೆ ನಡೆದ ದಾಳಿಯ ಬಳಿಕ ನೌಕಾಪಡೆ ಎಚ್ಛೆತ್ತುಗೊಂಡಿದ್ದು, ಭಾರತೀಯ ನೌಕಾಪಡೆಯು ಉತ್ತರ ಮತ್ತು ಮಧ್ಯ ಅರೇಬಿಯನ್ ಸಮುದ್ರ ಮತ್ತು ಅಡೆನ್ ಕೊಲ್ಲಿಯಲ್ಲಿ ಕಣ್ಗಾವಲು ಹೆಚ್ಚಿಸಿದೆ.
ಕಡಲ ಭದ್ರತಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಯಾವುದೇ ಘಟನೆಯ ಸಂದರ್ಭದಲ್ಲಿ ವ್ಯಾಪಾರಿ ಹಡಗುಗಳಿಗೆ ಸಹಾಯ ಮಾಡಲು ವಿಧ್ವಂಸಕ ನೌಕೆಗಳು ಮತ್ತು ಯುದ್ಧನೌಕೆಗಳನ್ನು ಒಳಗೊಂಡ ನೌಕಾ ಕಾರ್ಯ ಗುಂಪುಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆ ಇಂದು ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೂ ಮಹಾಸಾಗರದಲ್ಲಿ ಹೊಸ ಭದ್ರತಾ ಅಪಾಯಗಳನ್ನು ಪರಿಶೀಲಿಸಲು ಕೋಸ್ಟ್ ಗಾರ್ಡ್ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನೌಕಾಪಡೆ ತಿಳಿಸಿದೆ.
ಭಾರತೀಯ ಕರಾವಳಿಯಿಂದ 400 ಕಿ.ಮೀ ದೂರದಲ್ಲಿ ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲೂಟೊಗೆ ಡ್ರೋನ್ ಡಿಕ್ಕಿ ಹೊಡೆದ ಕೆಲವು ದಿನಗಳ ನಂತರ ಭಾರತೀಯ ನೌಕಾಪಡೆ ಈ ಕ್ರಮ ಕೈಗೊಂಡಿದೆ.