ಇಂದು 2023ರ ಕ್ಯಾಲೆಂಡರ್ ಮಗುಚಿ 2024ಕ್ಕೆ ಕಾಲಿಟ್ಟಿದ್ದಾರೆ 1,428,627,663 ಭಾರತೀಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ಸವಾಲುಗಳು, ಕೋವಿಡ್‌ನಂತಹಾ ಹಲವು ಆತಂಕಗಳ ನಡುವೆ 2023ಕ್ಯಾಲೆಂಡರ್ ವರ್ಷ ಕೊನೆಗೊಂಡಿದೆ.
ಡಿಸೆಂಬರ್ ಅಂತ್ಯದ ವರೆಗೆ ಭಾರತದ ಜನಸಂಖ್ಯೆ ಎಷ್ಟಿದೆ ಎಂದು ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ ಮುಂದೆ ಓದಿ…

ಭಾರತದ ಜನಸಂಖ್ಯೆ ಸದ್ಯ 1,428,627,663 ಆಗಿದೆ. 2020ರಲ್ಲಿ ಭಾರತದ ಜನಸಂಖ್ಯೆಯು 1,396,387,127 ಆಗಿದ್ದು, ಬಳಿಕ ಕೋವಿಡ್ ಕಾರಣದಿಂದಾಗಿ ಜನನ ಪ್ರಮಾಣ ಕಡಿಮೆಯಾಗಿ ಮರಣ ಪ್ರಮಾಣದಲ್ಲಿ ತುಸು ಏರಿಕೆ ಕಂಡಿತ್ತು. 2022 ರಲ್ಲಿ ಈ ಸಂಖ್ಯೆಯು ಮತ್ತೆ 1,417,173,173 ಏರಿಕೆ ಆಗಿತ್ತು.

2019 ರಲ್ಲಿ ಜನಸಂಖ್ಯೆಯ ಏರಿಕೆ ಪ್ರಮಾಣ ಶೇ. 1.3ರಷ್ಟಿತ್ತು. 2023ರ ವೇಳೆಗೆ ಈ ಪ್ರಮಾಣ 0.81ಕ್ಕೆ ಇಳಿಕೆಯಾಗಿತ್ತು. 2022ರಲ್ಲಿ 0.66 ರಷ್ಟಿದ್ದ ಪ್ರಮಾಣ 2023೩ರಲ್ಲಿ 0.81ಕ್ಕೆ ಏರಿಕೆ ಕಂಡಿದೆ.

ಜಾಗತಿಕ ಮಟ್ಟ ಗಮನಿಸಿದರೆ ಏಷ್ಯಾದ ರಾಷ್ಟ್ರಗಳಲ್ಲಿ ಜನಸಂಖ್ಯಾ ಸ್ಪೋಟ ಕಾಣಿಸಿಕೊಂಡಿದ್ದು, ಚೀನಾ, ಭಾರತ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳಿ ಜನಸಂಖ್ಯೆ ಏರಿಕೆ ಬಹುದೊಡ್ಡ ಸಮಸ್ಯೆಯಾಗುತ್ತಿದೆ.
ವಿಶ್ವ ಜನಸಂಖ್ಯೆಯು ಕಳೆದ ವರ್ಷದಲ್ಲಿ 75 ಮಿಲಿಯನ್ ಹೆಚ್ಚಾಗಿದೆ ಮತ್ತು ಹೊಸ ವರ್ಷದ ದಿನದಂದು ಇದು 8 ಶತಕೋಟಿಗೂ ಹೆಚ್ಚಾಗಲಿದೆ ಎಂದು ಯುಎಸ್ ಸೆನ್ಸಸ್ ಬ್ಯೂರೋ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!