ಯಶಸ್ಸಿನತ್ತ ಕೊಚ್ಚಿ ಮೆಟ್ರೋ ಹೆಜ್ಜೆ: ಇಲ್ಲಿದೆ ನೋಡಿ ಕಳೆದ ಆರು ವರ್ಷಗಳ ಪ್ರೋಗ್ರೆಸ್ ಕಾರ್ಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಕೊಚ್ಚಿ ಮೆಟ್ರೋ ತನ್ನ ಆರು ವರ್ಷಗಳ ಸೇವೆ ಯಶ್ವಿಯಾಗಿ ಪೂರೈಸಿದ್ದು ಏಳನೇ ವರ್ಷಕ್ಕೆ ಹೆಜ್ಜೆಯಿರಿಸಿದೆ.

ಜೂನ್ 19, 2017 ರಿಂದ ಡಿಸೆಂಬರ್ 29, 2023 ರವರೆಗಿನ ಅಂಕಿಅಂಶಗಳ ಪ್ರಕಾರ 10,33,59,589 ಮಂದಿ ಈ ಮೆಟ್ರೋದ ಸೇವೆ ಪಡೆದಿದ್ದಾರೆ.

ಪ್ರಯಾಣಿಕರ ನಿರ್ವಹಣೆಯಲ್ಲಿ ಕೊಚ್ಚಿ ಮೆಟ್ರೋ 2023ರಲ್ಲಿ ವಿಶೇಷ ಸಾಧನೆ ದಾಖಲಿಸಿದೆ. ಜನವರಿ 2023ರಲ್ಲಿ 79,130 ಆಗಿದ್ದ ಪ್ರಯಾಣಿಕರ ಸಂಖ್ಯೆ ಡಿಸೆಂಬರ್ ವೇಳೆಗೆ 94,೦೦೦ ದಾಟಿದೆ. ಅಕ್ಟೋಬರ್ 21 ರಂದು 1,32,161 ಮಂದಿ ಈ ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಇದು 2023ರ ಗರಿಷ್ಠ ಸಂಖ್ಯೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!