ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಸಾಮಾನ್ಯ ಸಂಸದ, ಮಾಧ್ಯಮಗಳು ಅವರ ಮಟ್ಟ ಮೀರಿ ಅವರನ್ನು ಹೈಲೈಟ್ ಮಾಡಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸಹೋದರ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಗುಣಾದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸಿಂಗ್, ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಿದಾಗ ರಾಹುಲ್ ಮುಖವನ್ನು ಟಿವಿಯಲ್ಲಿ ಸ್ವಲ್ಪ ಸಮಯ ತೋರಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗಾಂಧಿ ಕೇವಲ ಸಂಸದರಷ್ಟೇ, ಪಕ್ಷದ ಅಧ್ಯಕ್ಷರಲ್ಲ, ಕಾರ್ಯಕರ್ತ.ರಾಹುಲ್ ಗಾಂಧಿ ಬಗ್ಗೆ ಹೇಳಲು ಏನೂ ಇಲ್ಲ..ಮಾಧ್ಯಮಗಳು ಅವರನ್ನು ಹೈಲೈಟ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ರಾಹುಲ್ ಕೇವಲ ಸಂಸದರಾಗಿದ್ದು, ಪಕ್ಷದ ಇತರ ಸಂಸದರಿಗೆ ಸಮಾನರು. ಹುಟ್ಟಿನಿಂದಲೇ ಯಾರೂ ಪ್ರಸಿದ್ಧರಾಗಲ್ಲ. ಅವರ ಕಠಿಣ ಶ್ರಮ ಮತ್ತು ಜನರಲ್ಲಿ ಬೆರೆಯುವ ನಡವಳಿಕೆ ಮತ್ತು ವರ್ತನೆಗಳಿಂದ ವರ್ಚಸ್ಸು ಹೆಚ್ಚುತ್ತದೆ ಎಂದು ಐದು ಬಾರಿ ಸಂಸದ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲಕ್ಷ್ಮಣ್ ಸಿಂಗ್ ಹೇಳಿದರು.
ರಾಹುಲ್ ಅವರನ್ನು ಮಹಾನ್ ನಾಯಕ ಎಂದು ಪರಿಗಣಿಸಬಾರದು.ಅವರೇ ನಾನೊಬ್ಬ ಪಕ್ಷದ ಕಾರ್ಯಕರ್ತ ಮಾತ್ರ ಎಂದು ಹೇಳಿದ್ದಾರೆ ಎಂದು ನೆನಪಿಸಿದರು.
ಇನ್ನು ಲಕ್ಷ್ಮಣ್ ಸಿಂಗ್ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಲಕ್ಷ್ಮಣ್ ಸಿಂಗ್ ಅವರ ಹೇಳಿಕೆಯನ್ನು ಪಕ್ಷದ ನಾಯಕತ್ವ ಒಪ್ಪುತ್ತಿಲ್ಲ. ಮತ್ತೊಂದೆಡೆ, ಸಹೋದರನ ಕಾಮೆಂಟ್‌ಗಳಿಗೆ ದಿಗ್ವಿಜಯ್ ಸಿಂಗ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.