ಹೊಸ ದಾಖಲೆ ಬರೆದ ಅಟಲ್ ಸುರಂಗ: 24 ತಾಸುಗಳಲ್ಲಿ ಸಾಗಿತು 28,210 ವಾಹನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದಲ್ಲಿ ನೆಲಮಟ್ಟದಿಂದ ಬರೋಬ್ಬರಿ 3,100 ಮೀಟರ್ ಎತ್ತರದಲ್ಲಿರುವ ಅಟಲ್ ಸುರಂಗವು ಈಗ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಾಡಾಗಿದೆ.

ಈ ಸುರಂಗ ಮಾರ್ಗದಲ್ಲಿ ಸಂಚರಿಸಲು ದೇಶದೆಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಅಲ್ಲಿನ ಪೊಲೀಸ್ ಇಲಾಖೆ ಅಂಕಿಅಂಶ ಬಿಡುಗಡೆ ಮಾಡಿದೆ.

ಡಿ.26ಕ್ಕೆ ಅಂತ್ಯಗೊಂಡ ಹಿಂದಿನ ೨೪ ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 28,210 ವಾಹನಗಳು ಹಾದು ಹೋಗಿವೆ. ಈ ಪೈಕಿ 14,000 ವಾಹನಗಳು ಹಿಮಾಚಲ ಪ್ರದೇಶಕ್ಕೆ ಸೇರಿದ್ದರೆ, ಉಳಿದ 13,000 ವಾಹನಗಳು ರಾಜ್ಯದ ಹೊರಗಿನಿಂದ ಬಂದಿದ್ದವು ಎಂದು ಅಂಕಿಅಂಶಗಳಲ್ಲಿ ಹೇಳಲಾಗಿದೆ.

ಈ ಅಟಲ್ ಸುರಂಗವು ಬರೋಬ್ಬರಿ 9.02ಕಿಲೋ ಮೀಟರ್ ಉದ್ದ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!