ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಆರು ತಿಂಗಳ ಕಂದಮ್ಮ ಬಲಿಯಾಗಿದೆ.
ತಾಯಿ ಹಾಗೂ ಒಬ್ಬರು ಯೋಧರಿಗೆ ಗಂಭೀರವಾಗಿ ಗಾಯಗಳಾಗಿದೆ. ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮತ್ವಂಡಿ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ. ಕ್ರಾಸ್ ಫೈರಿಂಗ್ನಲ್ಲಿ ಆರು ತಿಂಗಳ ಕಂದಮ್ಮ ಮೃತಪಟ್ಟಿದ್ದು, ಕುಟುಂಬವದರು ಆಕ್ರಂದನ ಮುಗಿಲು ಮುಟ್ಟಿದೆ.
ಮಗು ಹಾಗೂ ತಾಯಿಗೆ ಮುತ್ವಾಂಡಿ ಗ್ರಾಮದ ಬಳಿ ನಕ್ಸಲೀಯರು ಗುಂಡು ಹಾರಿಸಿದ್ದಾರೆ. ತಾಯಿಯ ಕೈಗೆ ಗುಂಡು ತಗುಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.