ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ಕೇರಳ ಸರ್ಕಾರಕ್ಕೆ ಭರ್ಜರಿ ಆದಾಯ ತಂದುಕೊಟ್ಟಿದ್ದು, ಈ ಬಾರಿ ಡಿಸೆಂಬರ್ 22 ರಿಂದ 31 ರವರೆಗೆ ಬರೋಬ್ಬರಿ 543 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ.
ಈ ಪೈಕಿ ವರ್ಷಾಂತ್ಯದ ದಿನ ಡಿ.31ರಂದು 94.5 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದ್ದರೆ, ಡಿ.30 ರಂದು ಒಟ್ಟು 61.91 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.
ತಿರುವನಂತಪುರದ ಪವರ್ ಹೌಸ್ ರಸ್ತೆಯ ಔಟ್ ಲೆಟ್‌ನಲ್ಲಿ ಡಿಸೆಂಬರ್ 31ರಂದು ರಾಜ್ಯದಲ್ಲಿಯೇ ಅತೀ ಹೆಚ್ಚು ಎಂದರೆ 1.02 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇನ್ನು ಎರ್ನಾಕುಳಂ ರವಿಪುರಂನಲ್ಲಿ 77 ಲಕ್ಷ, ಇರಿಂಞಲಕುಡದಲ್ಲಿ 76 ಲಕ್ಷ, ಕೊಲ್ಲಂ ಆಶ್ರಮದಲ್ಲಿ 73 ಲಕ್ಷ ಮತ್ತು ಪಯ್ಯನ್ನೂರಿನಲ್ಲಿ 71 ಲಕ್ಷ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಂಕಿಅಂಶಗಳು ಹೇಳಿವೆ.