Thursday, January 1, 2026

CINE | ಪ್ರಭಾಸ್ ಅಭಿಮಾನಿಗಳಿಗೆ ಹೊಸ ವರ್ಷದ ಬಿಗ್ ಸರ್ಪ್ರೈಸ್: ‘ಸ್ಪಿರಿಟ್’ ಫಸ್ಟ್ ಲುಕ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಭಾಸ್ ಅಭಿಮಾನಿಗಳಿಗೆ ಹೊಸ ವರ್ಷದ ಸಂಭ್ರಮ ಇನ್ನಷ್ಟು ಜೋರಾಗಿದೆ. ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಸ್ಪಿರಿಟ್’ನ ಫಸ್ಟ್ ಲುಕ್ ಪೋಸ್ಟರ್ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ. ವಂಗಾ–ಪ್ರಭಾಸ್ ಕಾಂಬಿನೇಷನ್ ಘೋಷಣೆಯಾದ ದಿನದಿಂದಲೇ ಈ ಸಿನಿಮಾಗೆ ಭಾರಿ ಕುತೂಹಲ ಮೂಡಿದ್ದು, ಹೊಸ ವರ್ಷದ ಅಂಗವಾಗಿ ನಿರ್ದೇಶಕರು ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

12 ಗಂಟೆಗೆ ಸರಿಯಾಗಿ ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ಸ್ಪಿರಿಟ್’ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ “ಇನ್ನೂ ಕೆಲವೇ ನಿಮಿಷಗಳು… ನಾನು ನಿಮಗೆ ಭರವಸೆ ಕೊಡ್ತೀನಿ… ಸಂತೋಷ ನನ್ನ ಜೊತೆ ಇದೆ” ಎಂದು ಟ್ವೀಟ್ ಮಾಡಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದರು. ನಂತರ “ಭಾರತೀಯ ಸಿನಿಮಾ. ನಿಮ್ಮ ಅಜಾನುಬಾಹುವನ್ನು ವೀಕ್ಷಿಸಿ. 2026ರ ಹೊಸ ವರ್ಷದ ಶುಭಾಶಯಗಳು” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಬಿಡುಗಡೆಯಾದ ಫಸ್ಟ್ ಲುಕ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಕಿಟಕಿಯ ಪಕ್ಕದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ, ಶರ್ಟ್ ಧರಿಸದೇ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಎಣ್ಣೆ ಬಾಟಲಿ ಹಿಡಿದಿರುವ ಅವರು ಗಂಭೀರ ಹಾಗೂ ತೀವ್ರ ಲುಕ್‌ನಲ್ಲಿ ಮಿಂಚಿದ್ದಾರೆ. ಅವರ ಸಿಗರೇಟಿಗೆ ತೃಪ್ತಿ ದಿಮ್ರಿ ಬೆಂಕಿ ಹಚ್ಚುತ್ತಿರುವ ದೃಶ್ಯವೂ ಪೋಸ್ಟರ್‌ನಲ್ಲಿ ಗಮನ ಸೆಳೆಯುತ್ತದೆ.

ಒಟ್ಟಿನಲ್ಲಿ ‘ಸ್ಪಿರಿಟ್’ ಫಸ್ಟ್ ಲುಕ್, ಸಂದೀಪ್ ರೆಡ್ಡಿ ವಂಗಾ ಅವರ ಹಿಂದಿನ ‘ಅನಿಮಲ್’ ಸಿನಿಮಾದ ಛಾಯೆಯನ್ನು ನೆನಪಿಸುವಂತಿದ್ದು, ಪ್ರಭಾಸ್ ಹೊಸ ಅವತಾರವನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

error: Content is protected !!