ಭೂಕಂಪ ಪೀಡಿತ ಜಪಾನ್​ ನಿಂದ ಜೂ. ಎನ್​ಟಿಆರ್ ಭಾರತಕ್ಕೆ ವಾಪಾಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಪಾನ್​ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೆ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಹೊಸ ವರ್ಷದಂದೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು, ಜನರು ಇಡೀ ರಾತ್ರಿ ಕತ್ತಲೆಯಲ್ಲಿ ಮುಳುಗಿದ್ದರು. ಇದೀಗ ಅಲ್ಲಿ ಜೀವನ ಅಲ್ಲೋಲ ಕಲ್ಲೋಲವಾಗಿದೆ.

ಈ ಮಧ್ಯೆಯೇ, ನಟ ಜೂನಿಯರ್​ ಎನ್​ಟಿಆರ್ ಅವರು ಕ್ರಿಸ್​​ಮಸ್ ಹಬ್ಬದ ಸಂದರ್ಭದಲ್ಲಿ ಜಪಾನ್​ ಪ್ರವಾಸಕ್ಕೆ ತೆರಳಿದ್ದರು. ಭೂಕಂಪ ಆಗುವ ಸಮಯದಲ್ಲಿಯೂ ಅವರು ಅಲ್ಲಿಯೇ ಇದ್ದರು.

ಭೂಕಂಪದ ಸುದ್ದಿ ಕೇಳುತ್ತಿದ್ದಂತೆಯೇ ಜ್ಯೂನಿಯರ್​ ಎನ್​ಟಿಆರ್​ ಫ್ಯಾನ್ಸ್​ ಶಾಕ್​ಗೆ ಒಳಗಾಗಿದ್ದರು. ಇದೀಗ ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಿರುವ ನಟ, ತಾವು ಸೇಫ್​ ಆಗಿ ವಾಪಸಾಗಿರುವುದಾಗಿ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

‘ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್​ನಲ್ಲಿ ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್’ ಎಂದು ಅವರು ಹೇಳಿದ್ದಾರೆ.

https://twitter.com/tarak9999/status/1741898438403645634?ref_src=twsrc%5Etfw%7Ctwcamp%5Etweetembed%7Ctwterm%5E1741898438403645634%7Ctwgr%5E172f6c3daf11a4ddb554d3d3951c3fb03b297c3c%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Ftarak9999%2Fstatus%2F1741898438403645634%3Fref_src%3Dtwsrc5Etfw

ನಿನ್ನೆ ಅಂದರೆ ಜನವರಿ 1ರಂದು ಜ್ಯೂನಿಯರ್​ ಎನ್​ಟಿಆರ್​ ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಹೈದರಾಬಾದ್​ಗೆ ಆಗಮಿಸಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!