ಹೊಸ ದಿಗಂತ ವರದಿ, ವಿಜಯಪುರ:
ಯಾವತ್ತೂ ಅಪರಾಧಿ ಅಪರಾಧಿಯೇ. ಸಮಯ ಆದ ತಕ್ಷಣ ಅಂತಾ ಅಪರಾಧವೇ ಹೋಗಿ ಬಿಡುತ್ತಾ ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ ಪ್ರಕರಣ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಹೋಮ್‌ಮಿನಿಸ್ಟರ್ ಹಳೇ ಕೇಸ್ ಚುಕ್ತಾಗೆ ಹೇಳಿದ್ದಾರೆ. ಹಾಗಾಗಿ ಪ್ರಕರಣ ರೀ ಓಪನ್ ಎಂದರು.
ಅಪರಾಧಿಗಳಿಗೆ ಬೆಂಬಲ ಕೊಡುವ ಪ್ರಹ್ಲಾದ ಜೋಶಿ ನೀಚತನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಅರೆಸ್ಟ್ ಮಾಡಿದ್ದರೆ ಏನ್ ತಪ್ಪು ?, ಈಗ ಮಾಡಬಾರದು ಅಂತಾ ಇದೆಯಾ ?, ಜೋಶಿ ಏನು ಕೋರ್ಟಾ ? ಅವರು ಹೇಳಿದ್ದೇ ಪೈನಲ್ಲಾ ?, ಜೋಶಿ ಹೇಳಿದ್ದೇ ವೇದವಾಕ್ಯವಾ ? ಎಂದು ಕಿಡಿಕಾರಿದರು.
ಸೋನಿಯಾ- ರಾಹುಲ್ ಖುಷಿ ಪಡಿಸಲು ರಾಜ್ಯ ಸರ್ಕಾರದಿಂದ ಅರೆಸ್ಟ್ ಎನ್ನುವ ಜೋಶಿ ಆರೋಪದ ಕುರಿತು ಪ್ರತಿಕ್ರಿಯಿಸಿ, ಪ್ರಹ್ಲಾದ ಜೋಶಿ ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಮಾತನಾಡಲಿ. ಕಾನೂನು ಏನ್ ಹೇಳತ್ತೊ ಅದನ್ನ ಸರ್ಕಾರ ಮಾಡುತ್ತೆ ಎಂದರು.