ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿ ಗಲಭೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಿಜೆಪಿ ಇದನ್ನು ಖಂಡಿಸಿದ್ದು, ಸಿಎಂ ಸಿದ್ದರಾಮಯ್ಯ ಧರ್ಮ ಹಾಗೂ ದೇವರ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿಗೆ ಕಿವಿಮಾತು ಹೇಳಿದ್ದಾರೆ.
ಅಪರಾಧಿ ಅಂದ್ರೆ ಅಪರಾಧಿ ಅಷ್ಟೆ, ಜಾತಿ, ಕುಲ, ಗೋತ್ರ ಬೇಕಿಲ್ಲ. ಈ ರೀತಿ ಮಾಡೋದು ಸಮಾಜಕ್ಕೆ ಆತಂಕ ಸೃಷ್ಟಿಮಾಡುವಂತಾಗುತ್ತದೆ. ದೇವರು-ಧರ್ಮದ ಹೆಸರಿನಲ್ಲಿ ಕ್ಷುಲ್ಲಕ ರಾಜಕೀಯ ಬಿಟ್ಟು ಜವಾಬ್ದಾರಿಯಿಂದ ಕೆಲಸ ಮಾಡಿ ಸಾಕು ಎಂದು ಹೇಳಿದ್ದಾರೆ.
ಜನಸ್ಪಂದನ ಕಾರ್ಯಕ್ರಮ ಆರಂಭವಾಗಿದೆ. ಇದಕ್ಕೆ ಜನರಿಂದ ಬರುತ್ತಿರುವ ಪ್ರತಿಕ್ರಿಯೆ ನೋಡಿ ಬಿಜೆಪಿ ಭಯಬಿದ್ದಿದೆ. ಅದಕ್ಕಾಗಿಯೇ ಕ್ರಿಮಿನಲ್ ಬಂಧನ ಖಂಡಿಸಿ, ಧರ್ಮ, ದೇವರ ವಿಷಯ ತಂದಿದ್ದಾರೆ ಎಂದು ಹೇಳಿದ್ದಾರೆ.