ಹೊಸದಿಗಂತ ವರದಿ,ಹುಬ್ಬಳ್ಳಿ:
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಯಾರೆಂಬುವುದು ದೇಶಕ್ಕೆ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಗೊತ್ತಿದೆ. ಅವರು ಯಾರೆಂಬುವುದು ಪಾಕಿಸ್ತಾನ ಹಾಗೂ ಚೀನಾದಿಂದ ಬಂದವರಿಗೆ ಹೇಳುವ ಅವಶ್ಯಕತೆ ಇಲ್ಲ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಧರ್ಮ ಹಾಗೂ ಜಾತಿಯಾವುದು ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿಕೆಗೆ ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಈ ರೀತಿ ಪ್ರತಿಕ್ರಿಯಿಸಿದರು.
ಪಾಕಿಸ್ತಾನದವರಾಗಿದ್ದರೆ ಅವರಿಗೆ ಧರ್ಮ ಗೊತ್ತಿರಲ್ಲ, ಭಾರತದವರಾಗಿದ್ದರೇ ಅವರಿಗೆ ಖಂಡಿತ ಧರ್ಮ ಯಾವುದು ಎಂದು ಗೊತ್ತಿರುತ್ತದೆ. ಪಾಕಿಸ್ತಾನ ಹಾಗೂ ಚೀನಾದಿಂದ ಬಂದವರಿಗೆ ನಮ್ಮ ಧರ್ಮಯಾವುದು ಎಂದು ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿ.ಕೆ. ಹರಿಪ್ರಸಾದ ಮೊದಲು ತಮ್ಮ ಪಕ್ಷದಲ್ಲಿರುವ ಸ್ಥಾನ ಮಾನದ ಬಗ್ಗೆ ಅರಿಯಲಿ ಆ ಮೇಲೆ ಧರ್ಮ, ರಾಮ ಮಂದಿರ ಬಗ್ಗೆ ಮಾತನಾಡಲಿ. ಹರಿಪ್ರಸಾದ ಹೊಸದಾಗಿ ಏನು ಮಾತನಾಡಿಲ್ಲ. ಧರ್ಮದ ಬಗ್ಗೆ ಅವಹೇಳನ ಮಾಡುವುದು ಹರಿಪ್ರಸಾದ ಹಾಗೂ ಕಾಂಗ್ರೆಸ್‌ನ ನಿತ್ಯದ ಕಾಯಕ ಎಂದು ಹರಿಹಾಯ್ದರು.
ರಾಜ್ಯ ಸಿದ್ದರಾಮಯ್ಯ ಸರ್ಕಾರ ರಾಮ ಭಕ್ತರ ಮೇಲೆ ದೌರ್ಜನ್ಯ ಮಾಡಿ ಹೆದರಿಸಿ ತಡೆಯುವ ಪ್ರಯತ್ನ ಮಾಡುತ್ತಿದೆ. ಇದು ಟಿಪ್ಪು ಸಂಸ್ಕೃತಿಯಾಗಿದೆ. ಟಿಪ್ಪು ವಿಚಾರಧಾರೆಗಳನ್ನು ಕರ್ನಾಟಕ ಜನತೆ ಮೇಲೆ ಹೇರುವ ಕೆಲಸ ನಡೆಸಿದ್ದಾರೆ. ಯಾವುದೇ ಕರಸೇವಕ ಮುಟ್ಟಿದರೇ ನಾವು ಸುಮ್ಮನಿರಲ್ಲ. ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ಮಸೀದಿಗೆ ಮೊದಲು ಹೋಗುತ್ತಾರೆ: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮಸೀದಿಗೆ ಹೇಳದೆ ಕೇಳದೆ ಹೋಗುತ್ತಾರೆ. ಆಯೋಧ್ಯೆ ಬನ್ನಿ ಎಂದು ಕರೆದರೇ ಯೋಜನೆ ಮಾಡತ್ತೇವೆ ಎಂದು ಹೇಳುತ್ತಾರೆ. ಇದು ಹಿಂದೂ ಮುಸ್ಲಿಂ ಒಡೆಯುವು ಕಾಂಗ್ರೆಸ್ ಡಿಎನ್‌ಎಯಲ್ಲಿ ಬಂದಿದೆ. ಕರ್ನಾಟಕದಲ್ಲಿ ವಿಜೃಂಭಣೆಯಿಂದ ರಾಮ ಉತ್ಸವ ನಡೆದರೆ ಕಾಂಗ್ರೆಸ್ ಸಮಸ್ಯೆಯಾಗುತ್ತದೆ ಎಂದು ತಿಳಿದು ರಾಮಭಕ್ತರು ಹಾಗೂ ಕರಸೇವಕ ಅವರನ್ನು ಬೆದರಿಸುವ ಕೆಲಸ ಮಾಡಿ ಸೋನಿಯಾ ಹಾಗೂ ರಾಹುಲ್ ಗಾಂ ಮೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.