Thursday, January 1, 2026

ಹೊಸ ವರುಷಕ್ಕೆ ಮಾಲಿನ್ಯದ ಎಫೆಕ್ಟ್: ರಾಜ್ಯದ ಹಲವೆಡೆ ಗಾಳಿ ಗುಣಮಟ್ಟ ‘ಕಳಪೆ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಮೊದಲ ದಿನವೇ ಕರ್ನಾಟಕದ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಸಂಭ್ರಮಾಚರಣೆಯ ನಂತರ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ‘ಮಧ್ಯಮ’ದಿಂದ ‘ಕಳಪೆ’ ಮಟ್ಟಕ್ಕೆ ತಲುಪಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಆತಂಕದ ನೆರಳು ಮೂಡಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಗಾಳಿ ಗುಣಮಟ್ಟದ ವಿವರ ಇಲ್ಲಿದೆ:

ಬೀದರ್ ಜಿಲ್ಲೆಯು ರಾಜ್ಯದಲ್ಲೇ ಅತ್ಯಧಿಕ ಅಂದರೆ 189 AQI ನೊಂದಿಗೆ ಕಳಪೆ ಗಾಳಿಯನ್ನು ಹೊಂದಿದೆ. ಯಾದಗಿರಿ (168), ತುಮಕೂರು (167), ಮತ್ತು ಮಂಗಳೂರು (165) ನಗರಗಳಲ್ಲಿ ಗಾಳಿ ಗುಣಮಟ್ಟ ಹದಗೆಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ AQI 150 ರಿಂದ 168 ರಷ್ಟಿದ್ದು, ಉಸಿರಾಟದ ಸಮಸ್ಯೆಯ ಭೀತಿ ಎದುರಾಗಿದೆ.

ಉತ್ತರ ಕರ್ನಾಟಕದ ವಿಜಯಪುರ (68), ಬಾಗಲಕೋಟೆ (73) ಹಾಗೂ ಮಲೆನಾಡು ಶಿವಮೊಗ್ಗ (74) ಮತ್ತು ಚಾಮರಾಜನಗರದಲ್ಲಿ (76) ಗಾಳಿಯ ಗುಣಮಟ್ಟ ಹೊಂದಿದೆ.

ಇಂದಿನ ಗಾಳಿಯಲ್ಲಿ ಸೂಕ್ಷ್ಮ ಕಣಗಳಾದ PM2.5 ಮಟ್ಟ 73 µg/m³ ಮತ್ತು PM10 ಮಟ್ಟ 99 µg/m³ ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಗಂಟಲಿನ ಕಿರಿಕಿರಿ, ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.

error: Content is protected !!