ಲಕ್ಷದ್ವೀಪದಲ್ಲಿ ಸ್ನೋರ್ಕೆಲಿಂಗ್ ಮಾಡಿದ ಪೋಟೋ ಹಂಚಿಕೊಂಡ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಸಂದರ್ಭ ಸ್ನೋರ್ಕೆಲಿಂಗ್ ಪ್ರಯತ್ನಿಸಿದ ‘ಉಲ್ಲಾಸದಾಯಕ ಅನುಭವಗಳ’ ಗಳನ್ನು ಗುರುವಾರ ಹಂಚಿಕೊಂಡಿದ್ದಾರೆ.

ಈ ಭೇಟಿ ಸಂದರ್ಭ ಪೋಟೋಗಳನ್ನು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಸಾಹಸ ಮಾಡಲು ಬಯಸುವವರ ಪಟ್ಟಿಯಲ್ಲಿ ಲಕ್ಷದ್ವೀಪ ಇರಬೇಕು. ನಾನು ಸ್ನೋರ್ಕೆಲಿಂಗ್ ಪ್ರಯತ್ನಿಸಿದೆ. ಅದೊಂದು ಸಂತಸದ ಅದ್ಬುತ ಅನುಭವ’ ಎಂದು ಸಲಹೆ ನೀಡಿದ್ದಾರೆ

ಹವಳಗಳು ಮತ್ತು ಮೀನುಗಳ ಸಮೇತ ಪ್ರವಾಸದ ಫೋಟೋವನ್ನು ಹಂಚಿಕೊಳ್ಳುವಾಗ, ಲಕ್ಷದ್ವೀಪವು ಕೇವಲ ದ್ವೀಪಗಳ ಸಮೂಹವಲ್ಲ . ಇದು ಸಂಪ್ರದಾಯಗಳ ಪರಂಪರೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಅಗತ್ತಿ, ಬಂಗಾರಂ ಮತ್ತು ಕವರಟ್ಟಿಯಲ್ಲಿ ಜನರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ನಾನು ದ್ವೀಪದ ಜನರಿಗೆ ಧನ್ಯವಾದ ಹೇಳುತ್ತೇನೆ. ಅಭಿವೃದ್ಧಿಯ ಮೂಲಕ ಜನರ ಬದುಕನ್ನು ಮೇಲಕ್ಕೆತ್ತುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!