ಹೊಸ ದಿಗಂತ ವರದಿ, ಹುಬ್ಬಳ್ಳಿ:
ಪಂಜಾಬ್ ನಡುವಿನ ಪಂದ್ಯಕ್ಕೆ ಉತ್ತಮ ಅಭ್ಯಾಸ ಮಾಡಿದ್ದೇವೆ. ಹುಬ್ಬಳ್ಳಿ ಮೈದಾನವು ಚೆನ್ನಾಗಿದೆ. ನಾವು ಆತ್ಮ ವಿಶ್ವಾಸ ದಿಂದ ಪಂಜಾಬ್ ತಂಡವನ್ನು ಎದುರಿಸಲಿದ್ದೇವೆ ಎಂದು ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರವಾಲ್ ಹೇಳಿದರು.
ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿ ಬಂದು ಎರಡು ದಿನ ಅಭ್ಯಾಸ ನಡೆಸಿದ್ದೇವೆ. ತಂಡದಲ್ಲಿ ಇಬ್ಬರು ಯುವ ಸ್ಪಿನ್ನರ್ ಸೇರಿದ್ದಾರೆ. ಅವರಿಗೆ ಇದು ಒಳ್ಳೆಯ ಅವಕಾಶ. ಇಲ್ಲಿ ಚೆನ್ನಾಗಿ ಆಡಿದರೆ ಮುಂದೆ ಇನ್ನೂ ಅವಕಾಶಗಳು ಒಲಿದು ಬರಲಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ನಿರ್ಣಾಯಕ ಪರಿಸ್ಥಿತಿ ಎದುರಿಸಿದಾಗ ಗೆಲುವು ಸಾಧ್ಯ ಎಂದರು.
ಬೌಲಿಂಗ್ ವಿಭಾಗವು ಚೆನ್ನಾಗಿದೆ. ವೇಗದ ಹಾಗೂ ಸ್ಪಿನ್ ಬೌಲಿಂಗ್ ಹೊಂದಾಣಿಕೆ ಇದೆ. ಯುವ ಸ್ಪಿನ್ನರ್ ಗಳು ತಂಡದಲ್ಲಿ ಸೇರಿದ್ದು, ಅವರು ಚೆನ್ನಾಗಿ ಆಡುವ ವಿಶ್ವಾಸವಿದೆ. ಅನುಭವಿ ಬ್ಯಾಟರ್‌ಗಳು ತಂಡದಲ್ಲಿದ್ದಾರೆ. ಪ್ರತಿಯೊಂದು ಪಂದ್ಯದಲ್ಲಿ ನಿರ್ಣಾಯಕ ಪರಿಸ್ಥಿತಿ ಬರುತ್ತದೆ. ಅದನ್ನು ನಾವು ಗೆಲ್ಲಬೇಕು. ತಂಡ ಆಟಗಾರರೊಂದಿಗೆ ಈ ಬಗ್ಗೆ ಮಾತನಾಡಲಾಗುವುದು. ಪ್ರತಿಯೊಂದು ಪಂದ್ಯದಲ್ಲಿ ಆಟಗಾರರು ಬದಲಾಗುವುದು ಸಾಮಾನ್ಯ. ಪಂಜಾಬ್ ತಂಡವೂ ಸಹ ಚೆನ್ನಾಗಿದೆ ಎಂದು ಹೇಳಿದರು.