ಹೊಸ ದಿಗಂತ ವರದಿ, ಬೀದರ್ :
ಗೋದ್ರಾ ಮಾದರಿಯಲ್ಲಿ ಹತ್ಯಾಕಾಂಡದ ರೀತಿ ಕರ್ನಾಟಕದಲ್ಲಿಯೂ ಮರುಕಳಿಸಲಿದೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇದೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಈಶ್ವರ್ ಸಿಂಗ್ ಠಾಕೂರ್ ತೀವ್ರ ಖಂಡಿಸಿದ್ದಾರೆ.
ಶಾಂತಿಯ ತೋಟ ಕರ್ನಾಟಕದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಮತ್ತು ಹಿಂದುಗಳ ಮಾರಣ ಹೋಮಕ್ಕೆ ಸರ್ಕಾರ ಮತ್ತು ಕಾಂಗ್ರೆಸ್ ನ ನಾಯಕರಿಗೆ ಕುಮಕ್ಕು ನೀಡುತ್ತಾ ಇದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು.
ಹತ್ಯಾಕಾಂಡದ ಬಗ್ಗೆ ಮಾಹಿತಿ ಇದೆ ಎನ್ನುವ ಬಿ.ಕೆ. ಹರಿಪ್ರಸಾದ್ ಅವರು ಮಾಹಿತಿಯ ಮೂಲವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡಬೇಕು. ಇಡಿ ವಿಶ್ವವೇ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಎದುರು ನೋಡುತ್ತಿರುವ ಸಂದರ್ಭದಲ್ಲಿ ರಾಮ ಮಂದಿರಕ್ಕಾಗಿ ಹೋರಾಡಿದ ಕಾರ್ಯಕರ್ತರ ಮೇಲೆ ಮೂವತ್ತೊಂದು ವರ್ಷದ ಹಿಂದಿನ ಕೇಸ್ ಅನ್ನು ರಿ ಓಪನ್ ಮಾಡಿಸಿ ಬಂಧಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.