ಶಾಲೆಯಲ್ಲಿ ಬಾಂಬ್‌ನ್ನು ಬಾಲ್ ಎಂದು ತಿಳಿದು ಆಟ ಆಡಿದ ವಿದ್ಯಾರ್ಥಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬ ಬಾಲ್ ಎಂದು ತಿಳಿದು ಬಾಂಬ್ ಜೊತೆ ಆಟವಾಡಿದ್ದಾರೆ. ಸ್ಥಳದಲ್ಲೇ ಬಾಂಬ್ ಸ್ಫೋಟಗೊಂಡು ವಿದ್ಯಾರ್ಥಿ ಮೃತಪಟ್ಟಿದ್ದು, ಅಕ್ಕಪಕ್ಕ ಇದ್ದ ಮಕ್ಕಳು ಗಾಯಗೊಂಡಿದ್ದಾರೆ.

ದೌಲತಾಬಾದ್‌ನ ಚೋಯಾದಂಗದ ಶಾಲೆಯೊಂದರ ಎರಡನೇ ತರಗತಿ ವಿದ್ಯಾರ್ಥಿ ಮುಕ್ಲೇಸೋರ್ ರೆಹಮಾನ್ ಮೃತಪಟ್ಟಿದ್ದಾನೆ. ಶಾಲೆಯ ಆವರಣದಲ್ಲಿ ಬಾಂಬ್ ಪತ್ತೆಯಾಗಿದ್ದು ಹೇಗೆ? ಶಾಲೆಯಲ್ಲಿ ಶಿಕ್ಷಕರು ಏನು ಮಾಡುತ್ತಿದ್ದರು? ಎಂದು ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಮಧ್ಯಾಹ್ನ ಊಟದ ನಂತರ ವಿದ್ಯಾರ್ಥಿ ಬಾಂಬ್‌ನಲ್ಲಿ ಆಟವಾಡುತ್ತಿದ್ದ. ನಂತರ ಅದನ್ನು ಗೋಡೆಗೆ ಎಸೆದಿದ್ದಾನೆ. ಬಾಂಬ್ ಸ್ಫೋಟಗೊಂಡು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಶಬ್ದಕ್ಕೆ ಬೆಚ್ಚಿಬಿದ್ದಿದ್ದಾರೆ.

ಶಾಲೆ ಆವರಣದಲ್ಲಿ ಬಾಂಬ್ ಇಟ್ಟವರನ್ನು ಸುಮ್ಮನೆ ಬಿಡುವುದಿಲ್ಲ. ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!