ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ನಯನತಾರಾ ಅಭಿನಯದ ಅನ್ನಪೂರ್ಣಿ ಸಿನಿಮಾ ರಿಲೀಸ್ ಆಗಿದೆ. ಒಟಿಟಿಗೂ ಸಿನಿಮಾ ಕಾಲಿಟ್ಟಿದ್ದು, ಭರ್ಜರಿ ರೆಸ್ಪಾನ್ಸ್ ಗಳಿಸಿದೆ.
ಈ ಸಿನಿಮಾದಲ್ಲಿ ಅನ್ನಪೂರ್ಣಿ ತಂದೆಯ ಪಾತ್ರದಲ್ಲಿ ನಮ್ಮ ಕನ್ನಡ ಅಚ್ಯುತ್ ಕುಮಾರ್ ಅವರು ನಟಿಸಿದ್ದಾರೆ. ನಯನತಾರಾರಷ್ಟೇ ಮುಖ್ಯ ಪಾತ್ರ ಇದಾಗಿದ್ದು, ತಂದೆ ಮಗಳ ಸಂಘರ್ಷ ಇಲ್ಲಿ ಕಾಣಿಸುತ್ತದೆ.
ನನ್ನ ತಂದೆ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡ್ಬೇಕು ಅನ್ನೋದಕ್ಕೆ ದೊಡ್ಡ ಲಿಸ್ಟ್ ಇತ್ತು. ನಿರ್ದೇಶಕರು ಅಚ್ಯುತ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ರು. ನನ್ನ ಯಾವ ಸಿನಿಮಾದಲ್ಲಿಯೂ ಅಪ್ಪನ ಕ್ಯಾರೆಕ್ಟರ್ ಮಾಡದ ಆರ್ಟಿಸ್ಟ್ಗಾಗಿ ಹುಡುಕಾಟ ನಡೆದಿತ್ತು. ನಮ್ಮ ನಿರ್ಧಾರದ ಬಗ್ಗೆ ಹೆಮ್ಮೆ ಇದೆ.
ಅಚ್ಯುತ್ ಸರ್ ತುಂಬಾ ಗಂಭೀರ ಸ್ವಭಾವದವರು. ಮಾತು ತೀರಾ ಕಡಿಮೆ, ಊಟ ಆಯ್ತಾ ಅಂತ ಕೇಳಿದ್ರೂ ನಗುತ್ತಾ ಸನ್ನೆ ಮಾಡೋರು. ತಮಿಳು ಬರೋದಿಲ್ಲ. ಆದರೆ ಅವರ ಪರ್ಫಾಮೆನ್ಸ್ ತುಂಬಾ ಚೆನ್ನಾಗಿದೆ. ನನ್ನ ತಂದೆಯೇ ಅನ್ನೋವಷ್ಟು ಪಾತ್ರದಲ್ಲಿ ಇಬ್ಬರೂ ಇನ್ವಾಲ್ವ್ ಆಗಿದ್ದೆವು ಎಂದು ಹೇಳಿದ್ದಾರೆ.